ಎಷ್ಯಾ ಕಪ್ ನಲ್ಲಿ ಭಾರತದ ವಿರುದ್ಧ ಎರಡೆರಡು ಸಾರಿ ಸೋತ ಪಾಕಿಸ್ತಾನಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭಾರತೀಯರು ಸಖತ್ತಾಗೆ ಟ್ರೋಲ್ ಮಾಡಿದ್ದರು. ಇದೀಗ ಪಾಕಿಸ್ತಾನದ ವಿಮಾನ ನಿಲ್ದಾಣವೊಂದಕ್ಕೆ ಬೀದಿ ನಾಯಿಗಳು ನುಗ್ಗಿದ್ದು ದೊಡ್ಡ ಸುದ್ದಿಯಾಗುತ್ತಿದೆ.
ಇಸ್ಲಾಮಾಬಾದ್(ಅ.2) ಪಾಕಿಸ್ತಾನದ ನ್ಯೂ ಇಸ್ಲಾಮಾಬಾದ್ ವಿಮಾನ ನಿಲ್ದಾಣಕ್ಕೆ ಬೀದಿ ನಾಯಿಗಳು ನುಗ್ಗಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಒಂದು ವಿಮಾನ ನಿಲ್ದಾಣವನ್ನು ಸರಿಯಾಗಿ ನೋಡಿಕೊಳ್ಳಲು ಬಾರದ ಇವರಿಗೆ ಕಾಶ್ಮೀರ ಬೇಕಂತೆ! ಎಂದು ಟ್ರೋಲ್ ಮಾಡಲಾಗುತ್ತಿದೆ.
ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಕಟವಾದ ನಂತರ ವಿಮಾನ ನಿಲ್ದಾಣದ ಮ್ಯಾನೇಜರ್ ನನ್ನು ಅಮಾನತು ಮಾಡಲಾಗಿದೆ. ಅಲ್ಲದೇ ಪಾಕಿಸ್ತಾನದ ವಿಮಾನಯಾನ ಇಲಾಖೆ ಘಟನೆ ಸಂಬಂಧ ವರದಿ ನೀಡುವಂತೆಯೂ ತಿಳಿಸಿದೆ.
ಈ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಯಾವ ಸೌಲಭ್ಯಗಳು ಇಲ್ಲದೆ ಪರದಾಡುವ ಸ್ಥಿತಿ ಇದೆ ಎಂದು ಮೇಲಿಂದ ಮೇಲೆ ಅಲ್ಲಿನ ಮಾಧ್ಯಮಗಳು ವರದಿ ಮಾಡುತ್ತಿದ್ದರೂ ಸರಕಾರ ತಲೆ ಕೆಡಿಸಿಕೊಂಡಿರಲಿಲ್ಲ. ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಮಾನ ಹರಾಜಾಗಿದೆ.
