ಗೌರಿ ಲಂಕೇಶ್ ಅವರ ಹತ್ಯೆಗೆ ಶನಿವಾರವೇ ಸ್ಕೆಚ್ ಆಗಿರುವ ಸಾಧ್ಯತೆ ಇದೆ. ಶನಿವಾರದಂದು ಗಾಂಧಿ ಬಜಾರ್'ನಲ್ಲಿ ಗೌರಿ ಲಂಕೇಶ್ ಅವರನ್ನು ಯಾರೋ ಅಪರಿಚಿತರು ಹಿಂಬಾಲಿಸುತ್ತಿದ್ದರಂತೆ. ಹಾಗಂತ, ಗೌರಿ ಲಂಕೇಶ್ ಅವರು ತಮ್ಮ ತಾಯಿಯವರಿಗೆ ಹೇಳಿದ್ದರು. ಉತ್ತರಹಳ್ಳಿಯಲ್ಲಿಯಲ್ಲಿರುವ ತಮ್ಮ ತಾಯಿ ಮನೆಗೆ ಹೋದಾಗ ಗೌರಿ ಲಂಕೇಶ್ ಈ ವಿಚಾರವನ್ನು ತಿಳಿಸಿದ್ದರು. ಹಾಗಂತ, ಅವರ ತಾಯಿಯವರೇ ಪೊಲೀಸರಿಗೆ ಇದೀಗ ಮಾಹಿತಿ ನೀಡಿದ್ದಾರೆ.
ಬೆಂಗಳೂರು(ಸೆ. 06): ಗೌರಿ ಲಂಕೇಶ್ ಹತ್ಯೆ ಬಹಳ ಪೂರ್ವನಿಯೋಜಿತವಾಗಿ ನಡೆದಿರುವುದು ಸ್ಪಷ್ಟ. ಸಾಕಷ್ಟು ಮೊದಲೇ ಈಕೆಯ ಹತ್ಯೆಗೆ ಯೋಜನೆ ರೂಪಿಸಿರುವ ಸಾಧ್ಯತೆಯೇ ಹೆಚ್ಚು. ಗೌರಿ ಲಂಕೇಶ್ ಅವರ ತಾಯಿ ಪೊಲೀಸರಿಗೆ ನೀಡಿರುವ ಮಾಹಿತಿಯಿಂದ ಇದು ಇನ್ನಷ್ಟು ವೇದ್ಯವಾಗಿದೆ. ಗೌರಿ ಲಂಕೇಶ್ ಅವರ ಹತ್ಯೆಗೆ ಶನಿವಾರವೇ ಸ್ಕೆಚ್ ಆಗಿರುವ ಸಾಧ್ಯತೆ ಇದೆ. ಶನಿವಾರದಂದು ಗಾಂಧಿ ಬಜಾರ್'ನಲ್ಲಿ ಗೌರಿ ಲಂಕೇಶ್ ಅವರನ್ನು ಯಾರೋ ಅಪರಿಚಿತರು ಹಿಂಬಾಲಿಸುತ್ತಿದ್ದರಂತೆ. ಹಾಗಂತ, ಗೌರಿ ಲಂಕೇಶ್ ಅವರು ತಮ್ಮ ತಾಯಿಯವರಿಗೆ ಹೇಳಿದ್ದರು. ಉತ್ತರಹಳ್ಳಿಯಲ್ಲಿಯಲ್ಲಿರುವ ತಮ್ಮ ತಾಯಿ ಮನೆಗೆ ಹೋದಾಗ ಗೌರಿ ಲಂಕೇಶ್ ಈ ವಿಚಾರವನ್ನು ತಿಳಿಸಿದ್ದರು. ಹಾಗಂತ, ಅವರ ತಾಯಿಯವರೇ ಪೊಲೀಸರಿಗೆ ಇದೀಗ ಮಾಹಿತಿ ನೀಡಿದ್ದಾರೆ.
ಮೂರು ತಿಂಗಳ ಹಿಂದೆಯೇ ಗೌರಿ ಲಂಕೇಶ್ ಅವರು ತಮಗೆ ಜೀವ ಬೆದರಿಕೆ ಇರುವ ವಿಚಾರವನ್ನು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್ ಅವರ ಬಳಿ ಹೇಳಿಕೊಂಡಿದ್ದರು. ಯಾರೋ ಅಪರಿಚಿತ ವ್ಯಕ್ತಿ ದೂರವಾಣಿ ಕರೆ ಮಾಡಿ, ತನ್ನನ್ನು ಸಾಯಿಸುತ್ತೇನೆಂದು ಬೆದರಿಕೆ ಹಾಕಿದನೆಂದು ಗೌರಿ ಲಂಕೇಶ್ ತಿಳಿಸಿದ್ದರು.
