ಮಕ್ಕಳನ್ನು ಅವರ ಬಾಲ್ಯ ಕಸಿದುಕೊಂಡು ಹಣ ಗಳಿಸುವುದ್ದಕ್ಕಾಗಿ ಕಳ್ಳ ಸಾಗಾಣಿಕೆ ಮಾಡಿ ಅನೈತಿಕ ಕೆಲಸಗಳಿಗೆ ದೂಡುವುದನ್ನು ತಡೆಯಲು ರೂಪಿತವಾಗಿರುವ ಕಾನೂನುಗಳನ್ನು ಸರಿಯಾಗಿ ಜಾರಿಗೊಳಿಸುವ ಅಗತ್ಯವಿದೆ ಎಂದಿದ್ದಾರೆ.

ದೆಹಲಿಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಸಭಾ ಸದಸ್ಯ ರಾಜೀವ ಚಂದ್ರಶೇಖರ ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ರಾಷ್ಟ್ರೀಯ ಕಾರ್ಯ ವರದಿಯನ್ನು ಬಿಡುಗಡೆ ಗೊಳಿಸಿದ್ದಾರೆ.

ಈ ಸಂಧರ್ಭದಲ್ಲಿ ಮಾತನಾಡಿದ ಸಂಸದ ರಾಜೀವ ಚಂದ್ರಶೇಖರ್, ಮಕ್ಕಳನ್ನು ಅವರ ಬಾಲ್ಯ ಕಸಿದುಕೊಂಡು ಹಣ ಗಳಿಸುವುದ್ದಕ್ಕಾಗಿ ಕಳ್ಳ ಸಾಗಾಣಿಕೆ ಮಾಡಿ ಅನೈತಿಕ ಕೆಲಸಗಳಿಗೆ ದೂಡುವುದನ್ನು ತಡೆಯಲು ರೂಪಿತವಾಗಿರುವ ಕಾನೂನುಗಳನ್ನು ಸರಿಯಾಗಿ ಜಾರಿಗೊಳಿಸುವ ಅಗತ್ಯವಿದೆ ಎಂದಿದ್ದಾರೆ. ದೇಶದಿಂದ ವಾರ್ಷಿಕ 6 ರಿಂದ 9 ಲಕ್ಷ್ಯ ಸಣ್ಣ ವಯಸ್ಸಿನ ಹುಡುಗಿಯರನ್ನು ಪರ ದೇಶಕ್ಕೆ ವೇಶ್ಯಾವಾಟಿಕೆಗೆ ಕಳಿಸಲಾಗುತ್ತದೆ ಎಂದು ಹೇಳಿದ್ದು ದೇಶೀಯ ಉತ್ಪನ್ನ 350 ಮಿಲಿಯನ್ ಅಮೆರಿಕನ್ ಡಾಲರ್ ಹಣದ ವ್ಯವಹಾರ ನಡೆಯುತ್ತದೆ ಎಂಬ ಮಾಹಿತಿ ಹೊರ ಹಾಕಿದ್ದಾರೆ.