ಉ.ಪ್ರ. ಸಿಎಂ ಅಖಿಲೇಶ್ ಯಾದವ್ ರಾಯ್ ಬರೇಲಿ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಹಾಗೂ ಗುಜರಾತ್ ಟೂರಿಸಂ ರಾಯಭಾರಿ ಅಮಿತಾಬಚ್ಚನ್ ಲೇವಡಿ ಮಾಡಿದ್ದಾರೆ.
ನವದೆಹಲಿ (ಫೆ.20): ಉ.ಪ್ರ. ಸಿಎಂ ಅಖಿಲೇಶ್ ಯಾದವ್ ರಾಯ್ ಬರೇಲಿ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಹಾಗೂ ಗುಜರಾತ್ ಟೂರಿಸಂ ರಾಯಭಾರಿ ಅಮಿತಾಬಚ್ಚನ್ ಲೇವಡಿ ಮಾಡಿದ್ದಾರೆ.
ಸೂಪರ್ ಸ್ಟಾರ್ ಗೆ ನಾನು ಕೇಳಿಕೊಳ್ಳುವುದೇನೆಂದರೆ ನೀವು ಗುಜರಾತ್ ಕತ್ತೆಗಳ ಪರ ಪ್ರಚಾರ ಮಾಡುವುದನ್ನು ನಿಲ್ಲಿಸಿ ಎಂದು ಅಖಿಲೇಶ್ ಹೇಳಿದ್ದಾರೆ.
ಗುಜರಾತ್ ನ ಕುಚ್ ಜಿಲ್ಲೆಯಲ್ಲಿರುವ ಲಿಟಲ್ ರಾಣ್ ಪ್ರಾಣಿ ಅಭಯಾರಣ್ಯವನ್ನು ಜಾಹಿರಾತಿನಲ್ಲಿ ಪ್ರಮೋಟ್ ಮಾಡಲಾಗುತ್ತದೆ. ಇದನ್ನು ವ್ಯಂಗ್ಯ ಮಾಡಿ ಗುಜರಾತ್ ಕತ್ತೆಗಳನ್ನು ನೀವು ಪ್ರಚಾರ ಮಾಡಬೇಡಿ ಎಂದು ಅಖಿಲೇಶ್ ಯಾದವ್ ಅಮಿತಾಬಚ್ಚನ್ ಗೆ ಹೇಳಿದ್ದಾರೆ.
