ಇವಿಎಂ ಯಂತ್ರಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ, ಸೋಲನ್ನು ಒಪ್ಪಿಕೊಳ್ಳಿ. ಸುಮ್ಮನೆ ಆರೋಪ ಮಾಡಬೇಡಿ ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ.

ನವದೆಹಲಿ (ಮಾ.15): ಇವಿಎಂ ಯಂತ್ರಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ, ಸೋಲನ್ನು ಒಪ್ಪಿಕೊಳ್ಳಿ. ಸುಮ್ಮನೆ ಆರೋಪ ಮಾಡಬೇಡಿ ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ.

 ಸೋತ ಪಕ್ಷ ಯಾವಾಗಲೂ ತಮ್ಮ ಸೋಲಿಗೆ ಎವಿಎಂ ಯಂತ್ರಗಳನ್ನು ದೂಷಿಸುತ್ತಾರೆ. ಒಂದುವೇಳೆ ನೀವು ಗೆದ್ದರೆ ಇವಿಎಂ ಯಂತ್ರಗಳು ಸರಿಯಾಗಿವೆ. ಸೋತರೆ ಯಂತ್ರಗಳು ದೋಷಯುಕ್ತವಾಗಿವೆ ಎಂದು ಆರೋಪಿಸುತ್ತೀರಿ ಎಂದು ನಾಯ್ಡು ಹೇಳಿದ್ದಾರೆ.

ಜನರು ನಿಮ್ಮನ್ನು ತಿರಸ್ಕರಿಸಿದ್ದಾರೆ. ಹಾಗಾಗಿ ನೀವು ಇವಿಎಂ ನ ದೂಷಿಸುವ ಬದಲು ಸೋಲನ್ನು ಒಪ್ಪಿಕೊಳ್ಳಬೇಕು. ಭಾರತದಲ್ಲಿ ನಡೆಯುವ ಮತದಾನ ಪ್ರಕ್ರಿಯೆ ಒಪ್ಪತಕ್ಕ ವ್ಯವಸ್ಥೆಯಾಗಿದೆ ಎಂದು ನಾಯ್ಡು ಹೇಳಿದ್ದಾರೆ.