ಕ್ಯಾನ್‌ಬೆರಾ[ಜು.05]: ಮೊಸಳೆಗಳನ್ನು ತಮಗೆ ಬೇಕಾದ ರೀತಿ ಪಳಗಿಸುವ ಮೂಲಕ ವಿಶ್ವಾದ್ಯಂತ ಮೊಸಳೆ ಹಂಟರ್ ಎಂದೇ ಆಸ್ಟ್ರೇಲಿಯಾದ ಮೂಲದ ಸ್ಟೀವ್ ಇರ್ವಿನ್ ಯಾರಿಗೆ ತಾನೇ ಗೊತ್ತಿಲ್ಲ. ಅವರು ನಿಧನ ಹೊಂದಿ ಒಂದು ದಶಕಕ್ಕಿಂತ ಹೆಚ್ಚು ವರ್ಷವಾದರೂ, ಅವರು ತಮ್ಮ ಟೀವಿ ಶೋಗಳ ಮೂಲಕ ಅಜರಾಮರಾಗಿದ್ದಾರೆ.

ಇದೀಗ ಅವರಂತೆ ಅವರ ಪುತ್ರನಾದ 15 ವರ್ಷದ ರಾಬರ್ಟ್ ಇರ್ವಿನ್ ಸಹ ಮೊಸಳೆ ಪ್ರೇಮಿಯಾಗಿದ್ದಾರೆ.

ಅಲ್ಲದೆ, 15 ವರ್ಷಗಳ ಹಿಂದೆ ತಮ್ಮ ತಂದೆ ಸ್ಟೀವ್ ಆಸ್ಟ್ರೇಲಿಯಾದ ಅರಣ್ಯದಲ್ಲಿ ಅಪಾಯಕಾರಿ ಯಾದ ‘ಮುರ‌್ರೆ’ ಎಂಬ ಮೊಸಳೆಗೆ ಆಹಾರ ಕೊಟ್ಟಂತೆ ತಾವೂ ಆಹಾರ ತಿನ್ನಿಸಿದ್ದಾರೆ.