Asianet Suvarna News Asianet Suvarna News

ಪ್ರತಿಭಟನೆ ವೇಳೆ ಸಾವಿಗೀಡಾದವರ ಹಣೆ, ಎದೇಲಿ ಗುಂಡು!

ಸ್ಟರ್‌ಲೈಟ್‌ ತಾಮ್ರ ಸಂಸ್ಕರಣ ಘಟಕ ವಿಸ್ತರಣೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಪೊಲೀಸರ ಗುಂಡಿಗೆ ಬಲಿಯಾದ 13 ಜನರ ಪೈಕಿ, 12 ಜನರ ತಲೆ, ಎದೆಯಲ್ಲಿ ಗುಂಡು ಪತ್ತೆಯಾಗಿದೆ

Sterlite Protesters Shot In Head Chest Many From Back
Author
Thoothukudi, First Published Dec 23, 2018, 11:47 AM IST

ತೂತ್ತುಕುಡಿ[ಡಿ.23]: ಇಲ್ಲಿನ ಸ್ಟರ್‌ಲೈಟ್‌ ತಾಮ್ರ ಸಂಸ್ಕರಣ ಘಟಕ ವಿಸ್ತರಣೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಪೊಲೀಸರ ಗುಂಡಿಗೆ ಬಲಿಯಾದ 13 ಜನರ ಪೈಕಿ, 12 ಜನರ ತಲೆ, ಎದೆಯಲ್ಲಿ ಗುಂಡು ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಈ ಆಘಾತಕಾರಿ ಅಂಶ ಹೊರಬಿದ್ದಿದೆ.

ಗಲಭೆ ನಿಯಂತ್ರಣದ ವೇಳೆ ಪೊಲೀಸರಿಗೆ ಗುಂಡು ಹಾರಿಸುವ ಅಧಿಕಾರ ಇದೆಯಾದರೂ, ಅದು ಸೊಂಟಕ್ಕಿಂತ ಕೆಳಗೆ ಮಾತ್ರ ಹಾರಿಸಬೇಕು. ಆದರೆ ಸ್ಟರ್‌ಲೈಟ್‌ ಹಿಂಸಾಚಾರದ ವೇಳೆ ಸಾವನ್ನಪ್ಪಿದ 13 ಜನರ ಪೈಕಿ 12 ಜನರ ಎದೆ ಮತ್ತು ಹಣೆಯಲ್ಲಿ ಗುಂಡು ಪತ್ತೆಯಾಗಿರುವುದು ಹಾಗೂ ಇನ್ನೊಬ್ಬರ ತಲೆಗೆ ಹಿಂಭಾಗದಿಂದ ಅತ್ಯಂತ ಸಮೀಪದಿಂದ ಗುಂಡು ಹಾರಿಸಿರುವುದು ಸಾಕಷ್ಟುಅನುಮಾನಗಳಿಗೆ ಕಾರಣವಾಗಿದೆ.

ಪ್ರಕರಣ ಕುರಿತು ಈಗಾಗಲೇ ಸಿಬಿಐ ತನಿಖೆ ನಡೆಸುತ್ತಿದೆ.

Follow Us:
Download App:
  • android
  • ios