ಕೇರಳದ ಕಣ್ಣೂರಿನ ಪನೂರು ಪ್ರದೇಶದ ಬಿಜೆಪಿ ಕಚೇರಿ ಮೇಲೆ ಸ್ಥಳೀಯ ಪೊಲೀಸರು ದಾಳಿ ನಡೆಸಿದ್ದು, ತಪಾಸಣೆಯ ವೇಳೆ ಕಚೇರಿ ಆವರಣದಲ್ಲಿ ಹಲವು ತಲವಾರುಗಳು ಹಾಗೂ ಸ್ಟೀಲ್ ಬಾಂಬ್ ಪತ್ತೆಯಾಗಿದೆ.
ಕಣ್ಣೂರು(ಅ.11): ಕೇರಳದ ಕಣ್ಣೂರಿನ ಪನೂರು ಪ್ರದೇಶದ ಬಿಜೆಪಿ ಕಚೇರಿ ಮೇಲೆ ಸ್ಥಳೀಯ ಪೊಲೀಸರು ದಾಳಿ ನಡೆಸಿದ್ದು, ತಪಾಸಣೆಯ ವೇಳೆ ಕಚೇರಿ ಆವರಣದಲ್ಲಿ ಹಲವು ತಲವಾರುಗಳು ಹಾಗೂ ಸ್ಟೀಲ್ ಬಾಂಬ್ ಪತ್ತೆಯಾಗಿದೆ.
ಇತ್ತೀಚೆಗೆ ಸಿಪಿಎಂ ರ್ಯಾಲಿ ಮೇಲೆ ಆರೆಸ್ಸೆಸ್-ಬಿಜೆಪಿ ಕಾರ್ಯಕರ್ತರು ನಡೆಸಿದ್ದರೆನ್ನಲಾದ ದಾಳಿಗೆ ಸಂಬಂಧಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಕೇರಳದಲ್ಲಿ ಬಿಜೆಪಿ, ಆರೆಸ್ಸೆಸ್ ಕಾರ್ಯ ಕರ್ತರಿಗೆ ರಕ್ಷಣೆಯಿಲ್ಲ, ಕಾರ್ಯಕರ್ತರ ರಾಜಕೀಯ ಹತ್ಯೆ ನಡೆಯುತ್ತಿದೆ ಎಂದು ಆಪಾದಿಸಿ ಬಿಜೆಪಿ ಇತ್ತೀಚೆಗೆ ಇಲ್ಲಿ ಜನರಕ್ಷಾ ಯಾತ್ರೆ ನಡೆಸಿತ್ತು. ಆದರೆ ದೇಶದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಬಿಜೆಪಿ ಯಾವಾಗಲೂ ಘರ್ಷಣೆ ಮತ್ತು ಹಿಂಸೆಯಲ್ಲಿ ನಿರತವಾಗಿದೆ ಎಂದು ಸಿಪಿಎಂ ಆಪಾದಿಸಿತ್ತು. ಆರ್‌ಎಸ್‌ಎಸ್ ಕಾರ್ಯಕರ್ತನ ಮೇಲೆ ಹಲ್ಲೆ
ಆರ್‌ಎಸ್‌ಎಸ್ ಕಾರ್ಯಕರ್ತನೊಬ್ಬನನ್ನು ಆಟೋರಿಕ್ಷಾ ದಿಂದ ಎಳೆದು ಕಬ್ಬಿಣದ ರಾಡ್'ನಿಂದ ಹಲ್ಲೆ ನಡೆಸಿರುವ ಘಟನೆ ಕೇರಳದ ತಲಶ್ಶೇರಿಯಲ್ಲಿ ನಡೆದಿದೆ. ಹಲ್ಲೆಗೊಳಗಾದಾತನನ್ನು ಸುರೇ ಶ್ ಎಂದು ಗುರುತಿಸಲಾಗಿದ್ದು, ತಲೆ, ಕಾಲುಗಳಿಗೆ ಗಾಯಗಳಾಗಿವೆ.
ಸುರೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೇರಳದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರ ಹತ್ಯೆ ಖಂಡಿಸಿ ಕೇಂದ್ರ ಸಚಿವ ಕಿರಣ್ ರಿಜಿಜು, ವಿ.ಕೆ. ಸಿಂಗ್ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಪ್ರತಿ‘ಟನೆ ನಡೆಸಿದ ಮರುದಿನವೇ ಈ ಘಟನೆ ನಡೆದಿದೆ.
