ಕೇಂದ್ರ ಸರ್ಕಾರ ನೋಟಿನ ಅಪಮೌಲ್ಯೀಕರಣ ಕ್ರಮದ ವಿರುದ್ಧ ದೇಶಾದಾದ್ಯಂತ ಸಲ್ಲಿಸಲಾಗಿರುವ ಎಲ್ಲಾ ಅರ್ಜಿಗಳಿಗೆ ತಡೆಯಾಜ್ಞೆ ನೀಡಬೇಕೆಂದು ಮುಕುಲ್ ರೊಹ್ತಗಿ ನ್ಯಾ. ಅನಿಲ್ ಆರ್. ದಾವೆ ನೇತೃತ್ವದ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ನವದೆಹಲಿ (ನ.17): ನೋಟು ಅಪಮೌಲ್ಯೀಕರಣದ ವಿರುದ್ಧ ನ್ಯಾಯಾಲಯಗಳಲ್ಲಿ ಸಲ್ಲಿಸಲಾಗಿರುವ ಎಲ್ಲಾ ಅರ್ಜಿಗಳಿಗೆ ತಡೆಯಾಜ್ಞೆ ನೀಡುವಂತೆ ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ಮುಕುಲ್ ರೊಹ್ತಗಿ ಸುಪ್ರೀಂ ಕೋರ್ಟ್’ಗೆ ಮನವಿ ಮಾಡಿದ್ದಾರೆ.

ಕೇಂದ್ರ ಸರ್ಕಾರ ನೋಟಿನ ಅಪಮೌಲ್ಯೀಕರಣ ಕ್ರಮದ ವಿರುದ್ಧ ದೇಶಾದಾದ್ಯಂತ ಸಲ್ಲಿಸಲಾಗಿರುವ ಎಲ್ಲಾ ಅರ್ಜಿಗಳಿಗೆ ತಡೆಯಾಜ್ಞೆ ನೀಡಬೇಕೆಂದು ಮುಕುಲ್ ರೊಹ್ತಗಿ ನ್ಯಾ. ಅನಿಲ್ ಆರ್. ದಾವೆ ನೇತೃತ್ವದ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಮುಖ್ಯ ನ್ಯಾಯಾಧೀಶ ಟಿ.ಎಸ್.ಠಾಕೂರ್, ನೋಟಿನ ಅಪಮೌಲ್ಯೀಕರಣ ಕುರಿತ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸು ಸಾಧ್ಯತೆಗಳಿವೆ. ನೊಡು ನಿಷೇಧದ ವಿರುದ್ಧ ಸುಪ್ರೀಂ ಕೋರ್ಟ್’ನಲ್ಲೇ ಈಗಾಗಲೇ ನಾಲ್ಕು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ದಾಖಲಾಗಿವೆ.