ನವದೆಹಲಿ[ಆ.29]: ಪ್ರಖ್ಯಾತ ಟೈಮ್ಸ್‌ ನಿಯಾತಕಾಲಿಕೆ ಬಿಡುಗಡೆ ಮಾಡಿರುವ ‘2019 ರ ಜಗತ್ತಿನ 100 ಅಸಾಧಾರಣ ಸ್ಥಳ’ಗಳ ಪಟ್ಟಿಯಲ್ಲಿ ಗುಜರಾತ್‌ನಲ್ಲಿ ನಿರ್ಮಿಸಲಾಗಿರುವ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಏಕತಾ ಪ್ರತಿಮೆ ಜಾಗ ಪಡೆದಿದೆ. ಏಕತಾ ಪ್ರತಿಮೆ ಈ ಹಿರಿಮೆಗೆ ಪಾತ್ರವಾಗಿದ್ದಕ್ಕೆ ಪ್ರಧಾನಿ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ.

ಟೈಮ್ಸ್‌ ‘2019 ರ ಜಗತ್ತಿನ ನೂರು ಅಸಾಧಾರಣ ಸ್ಥಳಗಳ ಪೈಕಿ ಏಕತಾ ಪ್ರತಿಮೆ ಜಾಗ ಪಡೆದಿದ್ದು ಒಳ್ಳೆಯ ಸುದ್ದಿ. ಕೆಲ ದಿನಗಳ ಹಿಂದೆ ಒಂದೇ ದಿನದಲ್ಲಿ 34000 ಮಂದಿ ಭೇಟಿ ನೀಡಿ ದಾಖಲೆ ಸೃಷ್ಟಿಯಾಗಿತ್ತು. ಈ ತಾಣವು ಜನಪ್ರೀಯ ಪ್ರವಾಸ ಸ್ಥಳವಾಗಿ ಬೆಳೆಯುತ್ತಿರುವುದು ಸಂತಸ ತಂದಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ನರ್ಮದಾ ನದಿ ದಂಡೆಯಲ್ಲಿರುವ ಏಕತಾ ಪ್ರತಿಮೆ ಜಗತ್ತಿನ ಅತೀ ಎತ್ತರದ ಪ್ರತಿಮೆ ಎಂಬ ಖ್ಯಾತಿಗೆ ಪಾತ್ರವಾಗಿದ್ದು, ಈ ವರೆಗೆæ ಸುಮಾರು 26 ಲಕ್ಷ ಮಂದಿ ಪ್ರತಿಮೆ ಸಂದರ್ಶಿಸಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ 31 ರಂದು ಈ ಪ್ರತಿಮೆಯನ್ನು ಪ್ರಧಾನಿ ಲೋಕಾರ್ಪಣೆಗೊಳಿಸಿದ್ದರು.