ಪವರ್​ ಸ್ಟಾರ್​​ ಪುನಿತ್​​ ರಾಜ್​'ಕುಮಾರ್​ ಅಭಿನಯದ ಬಹು ನಿರೀಕ್ಷಿತ ಚಿತ್ರ ಅಂಜನಿಪುತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಬೆಂಗಳೂರು (ಡಿ.24): ಪವರ್​ ಸ್ಟಾರ್​​ ಪುನಿತ್​​ ರಾಜ್​'ಕುಮಾರ್​ ಅಭಿನಯದ ಬಹು ನಿರೀಕ್ಷಿತ ಚಿತ್ರ ಅಂಜನಿಪುತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಗುರುವಾರ ರಿಲೀಸ್​ ಆದ ಅಂಜನಿಪುತ್ರ ರಾಜ್ಯಾದ್ಯಂತ ಭಾರೀ ಕಲೆಕ್ಷನ್​​ ಕೂಡ ಮಾಡ್ತಾ ಇದೆ. ಆದರೆ ವಕೀಲರ ಸಮುದಾಯ ಅಂಜನಿಪುತ್ರನ ವಿರುದ್ಧ ಸಿಟ್ಟಿಗೆದ್ದು ಕೋರ್ಟ್​​ ಮೆಟ್ಟಿಲೇರಿದ್ದರು. ಚಿತ್ರದಲ್ಲಿ ರವಿಶಂಕರ್​ ಡೈಲಾಗ್​​'ನ್ನು ಕಟ್ ಮಾಡಬೇಕು. ಅಲ್ಲಿಯವರೆಗೂ ಚಿತ್ರ ಪ್ರದರ್ಶನಕ್ಕೆ ತಡೆ ನೀಡುವಂತೆ ವಕೀಲರು ಕೋರ್ಟ್​ನಲ್ಲಿ ಮನವಿ ಮಾಡಿದ್ದರು.

ಈ ಬಗ್ಗೆ ನಿನ್ನೆ ಸಂಜೆ 7 ಗಂಟೆಗೆ 'ಸುವರ್ಣ ನ್ಯೂಸ್​ನಲ್ಲಿ'  ನಡೆದ ಚರ್ಚಾ ಕಾರ್ಯಕ್ರಮದಲ್ಲಿ ವಕೀಲರ ಕೆಂಗಣ್ಣಿಗೆ ಗುರಿಯಾಗಿದ್ದ ಡೈಲಾಗ್ ಬಗ್ಗೆ ಪ್ರಶ್ನಿಸಿದಾಗ, ಚಿತ್ರ ವಿತರಕ ಜಾಕ್​ ಮಂಜು ಪ್ರತಿಕ್ರಿಯಿಸಿ ಅವಹೇಳನಕಾರಿ ಹೇಳಿಕೆಯನ್ನು ಕಟ್​ ಮಾಡಿ ವಿತರಿಸಲಾಗುವುದೆಂದು ಭರವಸೆ ನೀಡಿದರು. ಸದ್ಯ ಯಾವುದೇ ತಡೆ ಇಲ್ಲದೇ ಅಂಜನಿಪುತ್ರ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ.