ಇದು ಟಿಪ್ಪು ಬಗ್ಗೆ ಅವರಿಗೆ ಮನಸ್ಸಲ್ಲಿ ಏನಿದೆ ಅಂತಾ ಗೊತ್ತಾಗುತ್ತದೆ. ಅಂದು ಬಿಜೆಪಿ ಸಚಿವರು ನೋಡಿದಾಗ ರಾಜೀನಾಮೆ ಕೊಡಿಸಿದ್ದರು. ಈಗ ಇವರು ರಾಜೀನಾಮೆ ಕೊಡ್ತಾರಾ ನೋಡಬೇಕು. ಇದಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರಿಸಬೇಕು. ಟಿಪ್ಪು ಬಗ್ಗೆ ನಿಜವಾದ ಕಾಳಜಿ ಬಯಲಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರು(ನ.10): ಟಿಪ್ಪು ಜಯಂತಿ ಆಚರಣೆ ವೇಳೆ ಸಚಿವ ತಬ್ವೀರ್ ಸೇಠ್ ಅಶ್ಲೀಲ ಚಿತ್ರ ವೀಕ್ಷಣೆ ಕುರಿತಂತೆ ರಾಜ್ಯ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ಧಾರೆ. ತನ್ವೀರ್ ಸೇಠ್ ರಾಜೀನಾಮೆ ಕೊಡದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಹೇಳಿದೆ.

ಯಡಿಯೂರಪ್ಪ: ಯಾರೇ ತಪ್ಪು ಮಾಡಿದ್ರೂ ಕ್ರಮಕೈಗೊಳ್ಳಬೇಕು, ತನ್ವೀರ್​ ಸೇಠ್​ ತಪ್ಪು ಮಾಡಿದ್ದರೆ ಕ್ರಮಕೈಗೊಳ್ಳಬೇಕು 

ಜಗದೀಶ್ ಶೆಟ್ಟರ್: ನಾಳೆ ಸಚಿವ ತನ್ವೀರ್​​ ಸೇಠ್​​ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ನಾಳೆ ಬಿಜೆಪಿಯಿಂದ ರಾಜ್ಯಾದ್ಯಂತ ಪ್ರತಿಭಟನೆ.

ಬಸವರಾಜ ಹೊರಟ್ಟಿ: ಸಚಿವ ತನ್ವೀರ್​ ಸೇಠ್ ರಾಜೀನಾಮೆ ಕೊಡಬೇಕು. ತನ್ವೀರ್​ ಸೇಠ್​ ರಾಜೀನಾಮೆ ಸಿಎಂ ಪಡೆಯಬೇಕು 

ಎಚ್​.ಡಿ.ಕುಮಾರಸ್ವಾಮಿ: ಇದು ಟಿಪ್ಪು ಬಗ್ಗೆ ಅವರಿಗೆ ಮನಸ್ಸಲ್ಲಿ ಏನಿದೆ ಅಂತಾ ಗೊತ್ತಾಗುತ್ತದೆ. ಅಂದು ಬಿಜೆಪಿ ಸಚಿವರು ನೋಡಿದಾಗ ರಾಜೀನಾಮೆ ಕೊಡಿಸಿದ್ದರು. ಈಗ ಇವರು ರಾಜೀನಾಮೆ ಕೊಡ್ತಾರಾ ನೋಡಬೇಕು. ಇದಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರಿಸಬೇಕು. ಟಿಪ್ಪು ಬಗ್ಗೆ ನಿಜವಾದ ಕಾಳಜಿ ಬಯಲಾಗಿದೆ.

ಈಶ್ವರಪ್ಪ: ಸರ್ಕಾರಿ ಕಾರ್ಯಕ್ರಮದಲ್ಲಿ ಇಂತಹ ಕೆಲಸ ಮಾಡಿರುವುದು ಕಾನೂನಿನ ಉಲ್ಲಂಘನೆ, ಕೂಡಲೇ ರಾಜೀನಾಮೆ ಕೊಡಬೇಕು