ರಾಜ್ಯ ಸರ್ಕಾರಿ ನೌಕರರಿಗೆ ಸಿಎಂ ಬಂಪರ್ ಕೊಡುಗೆ?

First Published 30, Jan 2018, 5:23 PM IST
State Govt Employes may get Hike
Highlights

ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ?  ನಾಳೆ  6 ನೇ ವೇತನ ಯೋಗದ ವರದಿ  ಮುಖ್ಯಮಂತ್ರಿ ಸಿದ್ಧರಾಮಯ್ಯನವರ  ಕೈ ಸೇರಲಿದೆ .  

ಬೆಂಗಳೂರು (ಜ.30): ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ?  ನಾಳೆ  6 ನೇ ವೇತನ ಯೋಗದ ವರದಿ  ಮುಖ್ಯಮಂತ್ರಿ ಸಿದ್ಧರಾಮಯ್ಯನವರ  ಕೈ ಸೇರಲಿದೆ .  ವೇತನ ಆಯೋಗದ ಅಧ್ಯಕ್ಷ  ಎಂ.ಆರ್.ಶ್ರೀನಿವಾಸ ಮೂರ್ತಿ ಸಿಎಂಗೆ  ವರದಿ ಹಸ್ತಾಂತರಿಸಲಿದ್ದಾರೆ.  ವರದಿಯಲ್ಲಿ ಶೇಕಡಾ 25 ರಿಂದ 30 ರಷ್ಟು ವೇತನ ಹೆಚ್ಚಳದ ಶಿಫಾರಸ್ಸು ಮಾಡಿದ್ದು,  ಸಿಎಂ ಸಿದ್ದರಾಮಯ್ಯ ರಾಜ್ಯ  ನೌಕರರಿಗೆ ಎಷ್ಟು ಹೆಚ್ಚಳ ಮಡಲಿದ್ದಾರೆ  ಎಂಬುದು ಸದ್ಯದ ಕುತೂಹಲ.  

ಚುನಾವಣಾ ಹತ್ತಿರವಾಗುತ್ತಿದ್ದಂತೆ  ಸರ್ಕಾರ ನೌಕರರ ಸೆಳೆಯುವ ನಿಟ್ಟಿನಲ್ಲಿ ನಿರೀಕ್ಷಿತ ವೇತನ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.  ಮೂಲ ವೇತನದ ಮೇಲೆ ಶೇಕಡಾ 25 ರಿಂದ 30 ರಷ್ಟು ವೇತನ ಹೆಚ್ಚಳದ ಸಾಧ್ಯತೆಯಿದೆ ಎನ್ನಲಾಗುತ್ತಿದೆ.  ನಾಳೆ ಸಲ್ಲಿಕೆಯಾಗುವ ವೇತನ ಆಯೋಗದ ವರದಿಯ ಮೇಲೆ ಕುತೂಹಲ ಹೆಚ್ಚಿದೆ.

loader