ಗುಂಡ್ಲುಪೇಟೆ ಬಳಿ ಇರುವ ಅವರ ಹುಟ್ಟೂರಿನಲ್ಲಿ ಬುಧವಾರ ಬೆಳಗ್ಗೆ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ.

ಬೆಂಗಳೂರು(ಜ. 03): ಸಹಕಾರಿ ಸಚಿವ ಹೆಚ್.ಎಸ್.ಮಹದೇವ ಪ್ರಸಾದ್ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಇಂದು ಸಾರ್ವಜನಿಕ ರಜೆ ಘೋಷಣೆ ಮಾಡಿದೆ. ಮಹದೇವಪ್ರಸಾದ್ ಅವರಿಗೆ ಗೌರವ ಸೂಚಕವಾಗಿ ಮೂರು ದಿನ ಶೋಕಾಚರಣೆಯನ್ನೂ ಮಾಡಲು ನಿರ್ಧರಿಸಲಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಬುಧವಾರವೂ ಸಾರ್ವತ್ರಿಕ ರಜೆ ನೀಡಲಾಗುತ್ತಿದೆ.

ಗುಂಡ್ಲುಪೇಟೆ ಶಾಸಕ ಹಾಗೂ ಚಾಮರಾಜನಗರ ಉಸ್ತುವಾರಿ ಸಚಿವರೂ ಆಗಿದ್ದ ಮಹದೇವ ಪ್ರಸಾದ್ ಅವರು ಮಂಗಳವಾರ ಬೆಳಗ್ಗೆ ಕೊಪ್ಪ ಬಳಿಕ ಸೆರಾಯ್ ರೆಸಾರ್ಟ್'ನಲ್ಲಿ ನಿಧನರಾಗಿದ್ದರು. ಗುಂಡ್ಲುಪೇಟೆ ಬಳಿ ಇರುವ ಅವರ ಹುಟ್ಟೂರಿನಲ್ಲಿ ಬುಧವಾರ ಬೆಳಗ್ಗೆ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ.