ರೌಡಿ ಶೀಟರ್ ಓರ್ವನಿಗೆ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ವಿಶೇಷ ಅಭಿಯೋಜಕ ಹುದ್ದೆ ನೀಡಿರುವ ವಿಚಾರವೀಗ ಬೆಳಕಿಗೆ ಬಂದಿದೆ. ಇದರಿಂದ ಕಳ್ಳನ ಕೈಯಲ್ಲಿ ಗಂಟನ್ನು ನೀಡಿದಂತಾಗಿದೆ.

ಬೆಂಗಳೂರು(ಡಿ.1) ರೌಡಿ ಶೀಟರ್ ಓರ್ವನಿಗೆ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ವಿಶೇಷ ಅಭಿಯೋಜಕ ಹುದ್ದೆ ನೀಡಿರುವ ವಿಚಾರವೀಗ ಬೆಳಕಿಗೆ ಬಂದಿದೆ. ಇದರಿಂದ ಕಳ್ಳನ ಕೈಯಲ್ಲಿ ಗಂಟನ್ನು ನೀಡಿದಂತಾಗಿದೆ. ಈ ಆಯ್ಕೆ ಪ್ರಕ್ರಿಯೆಯಲ್ಲಿ ಗೃಹ ಸಚಿವ ರಾಮಲಿಂಗ ರೆಡ್ಡಿ ಅವರೂ ಕೂಡ ಪಾಲ್ಗೊಂಡಿರುವುದು ತಿಳಿದು ಬಂದಿದೆ. ರೌಡಿ ಶೀಟರ್ ಆಗಿದ್ದ ಸುಧಾಕರ್ ಎಂಬ ವ್ಯಕ್ತಿಗೆ ಸರ್ಕಾರವು ಎಸ್'ಪಿಪಿ ಹುದ್ದೆಯನ್ನು ನೀಡಿ ಕಳೆದ ಜುಲೈ 10ರಂದು ಆದೇಶ ನೀಡಿದೆ.

ಈ ವ್ಯಕ್ತಿ ವಿರುದ್ಧ ಪುಲಕೇಶಿ ನಗರ ಠಾಣೆಯಲ್ಲಿ ಪ್ರಕರಣಗಳಿದ್ದು, ಈಗಲೂ ಕೂಡ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದಾರೆ ಎನ್ನುವ ಆಘಾತಕಾರಿ ವಿಚಾರವೂ ಕೂಡ ಹೊರಬಿದ್ದಿದೆ. ರೌಡಿ ಶೀಟರ್ ಸುಧಾಕರ್'ಗೆ ಎಸ್'ಪಿಪಿ ಹುದ್ದೆಯನ್ನು ವಹಿಸಿ ಆದೇಶ ನೀಡಿದ್ದ ವೇಳೆ ಗೃಹ ಖಾತೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಯಲ್ಲೇ ಇತ್ತು. ಜೂ.25 ರಂದು ಜಿ ಪರಮೇಶ್ವರ್ ಅವರ ರಾಜೀನಾಮೆ ಅಂಗೀಕಾರವಾಗಿದ್ದು, ಅದಾದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಖಾತೆಯನ್ನು ತಾವೇ ವಹಿಸಿಕೊಂಡಿದ್ದು. ಸೆಪ್ಟೆಂಬರ್ 1 ರಂದು ರಾಮಲಿಂಗಾ ರೆಡ್ಡಿ ಅವರು ಗೃಹ ಖಾತೆಯನ್ನು ವಹಿಸಿಕೊಂಡಿದ್ದರು. ಸುಧಾಕರ್ ಅವರ ಯಾವುದೇ ಪೂರ್ವಾಪರ ತಿಳಿಯದೇ ಪ್ರಮುಖ ಹುದ್ದೆಯನ್ನು ರೌಡಿಶೀಟರ್ ಕೈಗೆ ವಹಿಸಿದಂತಾಗಿದೆ.