68ನೇ ಗಣರಾಜೋತ್ಸವದ ಹಿನ್ನೆಲೆಯಲ್ಲಿ 144 ಕೈದಿಗಳ ಬಿಡುಗಡೆಗೊಂಡಿದ್ದು....
ಬೆಂಗಳೂರು(ಜ.25): ರಾಜ್ಯಾದ್ಯಂತ ಸನ್ನಡತೆ ಆಧಾರದ ಮೇಲೆ 144 ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. 68ನೇ ಗಣರಾಜೋತ್ಸವದ ಹಿನ್ನೆಲೆಯಲ್ಲಿ 144 ಕೈದಿಗಳ ಬಿಡುಗಡೆಗೊಂಡಿದ್ದು, ಇವರಲ್ಲಿ ಓರ್ವ ಮಹಿಳಾ ಕೈದಿ ಸೇರಿದ್ದಾರೆ.
ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ 61,ಮೈಸೂರು ಕಾರಾಗೃಹದಿಂದ 23, ಬೆಳಗಾವಿ ಹಿಂಡಲಗ ಜೈಲಿನಿಂದ 17, ವಿಜಯಪುರದಿಂದ 16, ಬಳ್ಳಾರಿ ಸೆರೆಮನೆಯಿಂದ 09, ಕಲಬುರಗಿಯಿಂದ 18 ಕೈದಿಗಳು ಬಿಡುಗಡೆಗೊಂಡಿದ್ದಾರೆ ಎಂದು ಕಾರಾಗೃಹ ಇಲಾಖೆಯ ಡಿಜಿಪಿ ಸತ್ಯಾನಾರಾಯಣ ಸುವರ್ಣನ್ಯೂಸ್ಗೆ ತಿಳಿಸಿದ್ದಾರೆ.
