ಮುಂದಿನ ತಿಂಗಳಿನಿಂದ ತೆರಿಗೆ ಪಾವತಿ ಮಾಡುವಾಗ ಆಧಾರ್ ಕಾರ್ಡನ್ನು ಕಡ್ಡಾಯವಾಗಿ ನೀಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಜೊತೆಗೆ ಆಧಾರ್ ಕಾರ್ಡ್ ಡೇಟಾ ಸೋರಿಕೆಯಾಗುತ್ತಿರುವುದರ ಬಗ್ಗೆ ಎಚ್ಚರಿಕೆ ನೀಡಿದೆ.

ನವದೆಹಲಿ (ಜೂ.09): ಮುಂದಿನ ತಿಂಗಳಿನಿಂದ ತೆರಿಗೆ ಪಾವತಿ ಮಾಡುವಾಗ ಆಧಾರ್ ಕಾರ್ಡನ್ನು ಕಡ್ಡಾಯವಾಗಿ ನೀಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಜೊತೆಗೆ ಆಧಾರ್ ಕಾರ್ಡ್ ಡೇಟಾ ಸೋರಿಕೆಯಾಗುತ್ತಿರುವುದರ ಬಗ್ಗೆ ಎಚ್ಚರಿಕೆ ನೀಡಿದೆ.

ಕೆಲ ದಿನಗಳ ಹಿಂದೆ ಪಾನ್ ಕಾರ್ಡ್ ಗಳಿಗೂ ಕೂಡಾ ಆಧಾರನ್ನು ಕಡ್ಡಾಯಗೊಳಿಸಲಾಗಿತ್ತು. ಈಗಾಗಲೇ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಸಲ್ಲಿಸಿರುವವರು ಐಟಿ ರಿಟರ್ನ್ಸ್ ಫೈಲ್ ಮಾಡುವಾಗ ಅದರ ಲಿಂಕನ್ನು ಕೊಡಬೇಕು ಎಂದು ನ್ಯಾ.ಎ.ಕೆ ಸಿಕ್ರಿ ಮತ್ತು ಅಶೋಕ್ ಭೂಷಣ್ ಸದಸ್ಯ ಪೀಠವು ಹೇಳಿದೆ. ಕೇಂದ್ರ ಸರ್ಕಾರದ ಆಧಾರ ಯೋಜನೆಯು ಖಾಸಗಿ ಮಾಹಿತಿಗಳು ಸೋರುವ ಅಪಾಯವಿದೆಯೇ, ಖಾಸಗಿ ಹಕ್ಕು ಉಲ್ಲಂಘನೆಯಾಗುತ್ತದೆಯೇ ಎಂಬುದನ್ನು ಪ್ರಶ್ನಿಸಿ ಸಾಕಷ್ಟು ಅರ್ಜಿಗಳು ಬಂದಿದ್ದವು. ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಲಯ ಮಾಹಿತಿ ಸೋರಿಕೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

ಆಧಾರ್ ಕಾರ್ಡ್ ನೀಡದೇ ಇರುವ ಪಾನ್ ಕಾರ್ಡನ್ನು ನ್ಯಾಯಾಲಯ ತೀರ್ಮಾನಿಸುವವವರೆಗೆ ಅಮಾನ್ಯಗೊಳಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.