ಅಮೆರಿಕದೊಂದಿಗೆ ಸಂಭಾವ್ಯ ಅಣ್ವಸ್ತ್ರ ಸಮರ ಹಾಗೂ ಮೂರನೇ ಜಾಗತಿಕ ಯುದ್ಧ ತಪ್ಪಿಸಿ, ಜಗತ್ತನ್ನೇ ರಕ್ಷಿಸಿದ್ದ ಸೋವಿಯತ್ ಸೇನಾಧಿಕಾರಿ ಸ್ಟಾನಿಸ್ಲಾವ್ ಪೆಟ್ರೋವ್ ನಿಧನರಾಗಿದ್ದಾರೆ
ಮಾಸ್ಕೊ(ಸೆ.20): ಅಮೆರಿಕದೊಂದಿಗೆ ಸಂಭಾವ್ಯ ಅಣ್ವಸ್ತ್ರ ಸಮರ ಹಾಗೂ ಮೂರನೇ ಜಾಗತಿಕ ಯುದ್ಧ ತಪ್ಪಿಸಿ, ಜಗತ್ತನ್ನೇ ರಕ್ಷಿಸಿದ್ದ ಸೋವಿಯತ್ ಸೇನಾಧಿಕಾರಿ ಸ್ಟಾನಿಸ್ಲಾವ್ ಪೆಟ್ರೋವ್ ನಿಧನರಾಗಿದ್ದಾರೆ.
1983ರ ಸೆಪ್ಟೆಂಬರ್‌ನಲ್ಲಿ ಅಂದಿನ ಸೋವಿಯತ್ ಒಕ್ಕೂಟದ ಗುಪ್ತಚರ ವಿಭಾಗದಲ್ಲಿ ಪೆಟ್ರೋವ್ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಅಮೆರಿಕ ಖಂಡಾಂತರ ಕ್ಷಿಪಣಿಯೊಂದನ್ನು ರಷ್ಯಾದತ್ತ ಪ್ರಯೋಗಿಸಿದೆ ಎಂಬ ಸಂದೇಶ ರವಾನೆಯಾಗಿತ್ತು. ಈ ಕ್ಷಿಪಣಿ ದಾಳಿ ತಡೆಯಲು ರಷ್ಯಾ ಕೂಡಾ ಕೆಲವೇ ನಿಮಿಷಗಳಲ್ಲಿ ಪ್ರತಿ ದಾಳಿ ನಡೆಸಬೇಕಿತ್ತು. ಆದರೆ ಈ ಸಂದೇಶದ ನಿಖರತೆ ಬಗ್ಗೆ ಪೆಟ್ರೋವ್ ಅನುಮಾನ ವ್ಯಕ್ತಪಡಿಸಿ, ಪ್ರತಿದಾಳಿಯ ಸಾಧ್ಯತೆಯಿಂದ ಹಿಂದೆ ಸರಿದಿದ್ದರು. ಕೊನೆಗೆ ಅದು ತಪ್ಪು ಸಂದೇಶ ಎಂಬುದು ಖಚಿತವಾಗಿತ್ತು. ಒಂದು ವೇಳೆ ಆ ಸುದ್ದಿಯನ್ನು ನಂಬಿ ಪೆಟ್ರೋವ್, ಪ್ರತಿದಾಳಿಗೆ ಆದೇಶಿಸಿದ್ದೇ ಆಗಿದ್ದಲ್ಲಿ ಅಮೆರಿಕ ಮತ್ತು ಸೋವಿಯತ್ ಒಕ್ಕೂಟದ ನಡುವೆ ಮೂರನೇ ಮಹಾಯುದ್ಧ ಆರಂ‘ವಾಗುತ್ತಿತ್ತು.
ಹೀಗಾಗಿಯೇ ಪೆಟ್ರೋಟವ್ ಅವರನ್ನು ಹೀರೋ ಎಂದು ಪರಿಗಣಿಸಲಾಗುತ್ತದೆ.
