ಸದಾ ನಾಟಕ, ನೃತ್ಯ, ಸಂಗೀತದಿಂದ ಕಲಾ ರಸಿಕರನ್ನು ಕೈಬೀಸಿ ಕರೆಯುತ್ತಿದ್ದ ಹನುಮಂತನಗರದ ಕೆಂಗಲ್ ಹನುಮಂತಯ್ಯ ಕಲಾಸೌಧ ಕಳೆದ 6 ತಿಂಗಳಿಂದ ರಂಗಚಟುವಟಿಕೆಗಳಿಲ್ಲದೆ ಪಾಳು ಬಿದ್ದಿದೆ. ಟೆಂಡರ್ ಸಮಸ್ಯೆಯಿಂದಾಗಿ ಬಿಬಿಎಂಪಿ ಇದಕ್ಕೆ ಬೀಗ ಜಡಿದಿದೆ.  ಕಲಾಸೌಧ ಉಳಿಸಿ ಎಂಬ ಹೆಸರಿನಲ್ಲಿ ಅಭಿಯಾನ ಕೂಡಾ ಆರಂಭವಾಗಿದೆ.  ಬನ್ನಿ ನೀವೂ ಕೈ ಜೋಡಿಸಿ. ನಿಮ್ಮ ಸಹಿ ಹಾಕಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿhttps://goo.gl/ZfXhn6

ಬೆಂಗಳೂರು (ಜು.12): ಸದಾ ನಾಟಕ, ನೃತ್ಯ, ಸಂಗೀತದಿಂದ ಕಲಾ ರಸಿಕರನ್ನು ಕೈಬೀಸಿ ಕರೆಯುತ್ತಿದ್ದ ಹನುಮಂತನಗರದ ಕೆಂಗಲ್ ಹನುಮಂತಯ್ಯ ಕಲಾಸೌಧ ಕಳೆದ 6 ತಿಂಗಳಿಂದ ರಂಗಚಟುವಟಿಕೆಗಳಿಲ್ಲದೆ ಪಾಳು ಬಿದ್ದಿದೆ. ಟೆಂಡರ್ ಸಮಸ್ಯೆಯಿಂದಾಗಿ ಬಿಬಿಎಂಪಿ ಇದಕ್ಕೆ ಬೀಗ ಜಡಿದಿದೆ.

ಪಿ ಡಿ ಸತೀಶ್ ಚಂದ್ರ ಎಂಬುವವರು 2009 ರಲ್ಲಿ ಕೆ.ಎಚ್ ಕಲಾಸೌಧ ನಿರ್ವಹಣೆಯ ಟೆಂಡರ್ ಪಡೆದಿದ್ದರು. 2014 ರಲ್ಲಿ ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿತ್ತು. ಆ ನಂತರ ಬಿಬಿಎಂಪಿ ಟೆಂಡರ್ ಅವಧಿಯನ್ನು ವಿಸ್ತರಿಸಿತ್ತು. 2017 ಫೆಬ್ರವರಿ ನಂತರ ವಿಸ್ತರಣೆ ಆಗಿಲ್ಲ.ಹೀಗಾಗಿ ಕಳೆದ 6 ತಿಂಗಳಿಂದ ಕಲಾಸೌಧದಲ್ಲಿ ರಂಗ ಚಟುವಟಿಕೆಗಳು ಸ್ತಬ್ದಗೊಂಡಿದೆ. ಅನೇಕ ಕಲಾವಿದರು ಬಿಬಿಎಂಪಿ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಲಾಸೌಧ ಉಳಿಸಿ ಎಂಬ ಹೆಸರಿನಲ್ಲಿ ಅಭಿಯಾನ ಕೂಡಾ ಆರಂಭವಾಗಿದೆ. ಬನ್ನಿ ನೀವೂ ಕೈ ಜೋಡಿಸಿ. ನಿಮ್ಮ ಸಹಿ ಹಾಕಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

https://goo.gl/ZfXhn6

ಸಹಿ ಸಂಗ್ರಹ ಅಭಿಯಾನದ ಮೂಲಕ ಸಂಬಂಧಪಟ್ಟವರಿಗೆ ಕೇಳಿಕೊಳ್ಳುವುದೇನೆಂದರೆ;

* ಈ ಕೂಡಲೇ ಕಲಾಸೌಧವನ್ನು ಮರು ತೆರೆಯಬೇಕು.

* ಬಾಡಿಗೆಯನ್ನು ಈಗಿರುವಂತೆಯೇ ಇಡಬೇಕು. ಹೆಚ್ಚಿಸಬಾರದು. ಎಲ್ಲರಿಗೂ ಕೈಗೆಟಕುವ ದರವನ್ನು ನಿಗದಿಪಡಿಸಬೇಕು.

* ಕಲಾ ಸೌಧವನ್ನು ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಮಾತ್ರ ಮೀಸಲಿಡಬೇಕು. ಬೇರೆ ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದು.