ಮುಂಬೈ (ಸೆ.09): ನೌಕಾಪಡೆಯಲ್ಲಿ ನೇಮಕಾತಿಗಾಗಿ ಪರೀಕ್ಷೆಗಳು ನಡೆಯುತ್ತಿರುವ ಸ್ಥಳದಲ್ಲಿ ಕಾಲ್ತುಳಿತ ಸಂಭವಿಸಿದ್ದು ಹಲವರು ಗಾಯಗೊಂಡಿರುವ ಘಟನೆ ಮುಂಬೈಯ ಮಲಾಡ್'ನಲ್ಲಿ ಇಂದು ಬೆಳಗ್ಗೆ ನಡೆದಿದೆ.

ನೌಕಾನೆಲೆ ಐಎನ್ಎಸ್ ಹಮ್ಲಾದಲ್ಲಿ ಆಯೋಜಿಸಲಾಗಿದ್ದ ನೇಮಕಾತಿಗೆ ಪ್ರಕ್ರಿಯೆಗೆ ಸುಮಾರು 6 ಸಾವಿರ ಅಭ್ಯರ್ಥಿಗಳು ಶುಕ್ರವಾರ ಬೆಳಗ್ಗೆ ಒಮ್ಮೆಗೆ ಧಾವಿಸಿದ್ದಾರೆ.

ಗೇಟ್ ಒಳಗೆ ಪ್ರವೇಶಿಸುವ ಸಂದರ್ಭದಲ್ಲಿ ನೂಕುನಗ್ಗಲು ಉಂಟಾಗಿದ್ದು, ಕಾಲ್ತುಳಿತ ಸಂಭವಿಸಿ ಇಬ್ಬರು ಗಾಯಗೊಂಡಿದ್ದಾರೆ, 

ಕಾಳ್ತುಳಿತ ಸಂಭವಿಸಿಲ್ಲ: ನೌಕಾಸೇನೆ

ಆದರೆ ನೌಕಾಸೇನೆಯ ಅಧಿಕಾರಿಗಳು ಕಾಳ್ತುಳಿತ ಘಟನೆಯನ್ನು ಅಲ್ಲಗಳೆದಿದ್ದಾರೆ. "ಸಾಮಾನ್ಯವಾಗಿ ಒಂದುವರೆ- ಎರಡು ಸಾವಿ ಮಂದಿ ಪರೀಕ್ಷೆಗಾಗಿ ಬರುತ್ತಾರೆ. ಆದರೆ ಇಂದು ಮೂರು ಪಟ್ಟು ಹೆಚ್ಚು ಅಭ್ಯರ್ಥಿಗಳು ಬಂದಿದ್ದರಿಂದ ಸ್ಥಳದಲ್ಲಿ ಸಣ್ಣಪುಟ್ಟ ಗೊಂದಲಗಳಾಗಿತ್ತೆ ವಿನಹ ಯಾವುದೇ ಕಾಳ್ತುಳಿತ ಉಂಟಾಗಿಲ್ಲ." ಎಂದು ನೌಕಾಸೇನೆಯ ವಕ್ತಾರ ಕ್ಯಾ. ಡಿ.ಎಚ್.ಶರ್ಮಾ ಹೇಳಿದ್ದಾರೆ.

(ಸಾಂದರ್ಭಿಕ ಚಿತ್ರ)