ಪಶ್ಚಿಮ ಬಂಗಾಳ ಸರಕಾರವು 9 ಸಾವಿರ ಪೊಲೀಸರನ್ನು ರಕ್ಷಣೆಗೆ ನಿಯೋಜಿಸಿತ್ತು. 165 ಸಿಸಿಟಿವಿಗಳನ್ನು ಸ್ಥಾಪಿಸಲಾಗಿತ್ತು. 20 ಹಡಗುಗಳು ಮತ್ತು ಒಂದು ಡ್ರೋನ್ ಅನ್ನೂ ಭದ್ರತೆಗೆ ಬಳಸಲಾಗಿತ್ತು. ಆದರೂ ಕಾಲ್ತುಳಿತದ ದುರ್ಘಟನೆ ತಡೆಯಲು ಸಾಧ್ಯವಾಗಲಿಲ್ಲ.

ಕೋಲ್ಕತಾ(ಜ. 15): ಮಕರ ಸಂಕ್ರಾಂತಿಯ ಅಂಗವಾಗಿ ನಡೆದ ಗಂಗಾಸಾಗರ್ ಮೇಳದಲ್ಲಿ ಕಾಲ್ತುಳಿತದ ದುರಂತ ಸಂಭವಿಸಿದ್ದು, 6ಕ್ಕೂ ಹೆಚ್ಚು ಜನರ ದುರ್ಮರಣವಾಗಿದೆ. ಈ ಘಟನೆಯಲ್ಲಿ 10ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.

Add Asianetnews Kannada as a Preferred SourcegooglePreferred

ಸೌಥ್24 ಪರ್ಗಾಣದ ಕಚುಬೇರಿಯಾ ಎಂಬ ಪ್ರದೇಶದಲ್ಲಿ ಜನರು ದೋಣಿಯನ್ನು ಏರುವಾಗ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾಗಿ ಎಎನ್'ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಭಾರೀ ಸಂಖ್ಯೆಯಲ್ಲಿ ಭಕ್ತಸಮೂಹ ನೆರೆಯುವುದರಿಂದ ಪಶ್ಚಿಮ ಬಂಗಾಳ ಸರಕಾರವು 9 ಸಾವಿರ ಪೊಲೀಸರನ್ನು ರಕ್ಷಣೆಗೆ ನಿಯೋಜಿಸಿತ್ತು. 165 ಸಿಸಿಟಿವಿಗಳನ್ನು ಸ್ಥಾಪಿಸಲಾಗಿತ್ತು. 20 ಹಡಗುಗಳು ಮತ್ತು ಒಂದು ಡ್ರೋನ್ ಅನ್ನೂ ಭದ್ರತೆಗೆ ಬಳಸಲಾಗಿತ್ತು. ಆದರೂ ಕಾಲ್ತುಳಿತದ ದುರ್ಘಟನೆ ತಡೆಯಲು ಸಾಧ್ಯವಾಗಲಿಲ್ಲ.

ಮಕರ ಸಂಕ್ರಾಂತಿ ಇದ್ದ ಶನಿವಾರದಂದು 16 ಲಕ್ಷ ಭಕ್ತಾದಿಗಳು ಇದೇ ಗಂಗಾಸಾಗರ್'ನಲ್ಲಿ ಮಿಂದು ಕಪಿಲ ಮುನಿ ದೇಗುಲದಲ್ಲಿ ಪೂಜೆ ಸಲ್ಲಿಸಿದ್ದರು. ಈ ಬಾರಿಯ ಗಂಗಾ ಸಾಗರ್ ಮೇಳದ ಸ್ವಚ್ಛತೆಗೆ ಆದ್ಯತೆ ನೀಡಲಾಗಿತ್ತು. ಇದರ ಭಾಗವಾಗಿ 10 ಸಾವಿರ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಗಂಗೆ ಮಲಿನವಾಗುವುದನ್ನು ತಡೆಯಲಾಗಿದೆ.