ಚೆನ್ನೈನ ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಡಿಎಂಕೆಯ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಅವರ ಪಕ್ಷದ ಶಾಸಕರು ಸೇರಿದಂತೆ 5 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.
ಚೆನ್ನೈ(ಅ.17): ಕಾವೇರಿ ನಿರ್ವಹಣ ಮಂಡಳಿ ರಚಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ತಮಿಳುನಾಡಿನಲ್ಲಿ 48 ಗಂಟೆಗಳ ಕಾಲ ಹಮ್ಮಿಕೊಂಡಿದ್ದ ರೈಲ್ ರಖೋ ಪ್ರತಿಭಟನೆಯಲ್ಲಿ 8 ಜಿಲ್ಲೆಗಳಿಂದ 2 ಸಾವಿರ ರೈತರು ಸೇರಿದಂತೆ ಸಾವಿರಾರು ಮಂದಿಯನ್ನು ಬಂಧಿಸಲಾಗಿದೆ.
ಚೆನ್ನೈನ ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಡಿಎಂಕೆಯ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಅವರ ಪಕ್ಷದ ಶಾಸಕರು ಸೇರಿದಂತೆ 5 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ನಾಳೆ ಕಾವೇರಿ ನೀರು ಹಂಚಿಕೆ ವಿಚಾರವಾಗಿ ಐತಿಹಾಸಿಕ ತೀರ್ಪು ಬರಲಿದ್ದು, ಈ ಹಿನ್ನೆಲೆಯಲ್ಲಿ ಎಲ್ಲರ ಗಮನ ಸುಪ್ರೀಕೋರ್ಟ್ನತ್ತ ನೆಟ್ಟಿದೆ.
2 ರಾಜ್ಯಗಳ ಬಗ್ಗೆ ತಜ್ಞರು ಸಲ್ಲಿಸಿರುವ ವರದಿ ಇಲ್ಲಿದೆ
ಕರ್ನಾಟಕದ ಬಗ್ಗೆ ತಜ್ಞರ ತಂಡದ ವರದಿಯಲ್ಲೇನಿದೆ?
* ಕರ್ನಾಟಕದಲ್ಲಿ ಈ ವರ್ಷ ಶೇ. 51ರಷ್ಟು ಕಡಿಮೆ ಮಳೆಯಾಗಿದೆ.
* ಕಾವೇರಿ ಕೊಳ್ಳದಲ್ಲಿ 25 ವರ್ಷಗಳಲ್ಲೇ ಅತಿ ಕಡಿಮೆ ಮಳೆಯಾಗಿದೆ
* ಕಾವೇರಿಯ 4 ಜಲಾಶಯಗಳಲ್ಲಿ 19 ವರ್ಷಗಳಲ್ಲೇ ಅತ್ಯಂತ ಕಡಿಮೆ ಒಳಹರಿವು ಇದೆ
* 1436 ಕೆರೆಗಳ ಪೈಕಿ ಶೇ.53ರಷ್ಟು ಕೆರೆಗಳಲ್ಲಿ ನೀರೇ ಇಲ್ಲ
* ಶೇ. 39ರಷ್ಟು ಕೆರೆಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದ ನೀರಿನ ಸಂಗ್ರಹವಿದೆ
* ಕಾವೇರಿ ಕೊಳ್ಳ ಪ್ರದೇಶದ ಅಂತರ್ಜಲ ಪ್ರಮಾಣವೂ ಅಪಾಯಕಾರಿ ಸ್ಥಿತಿಯಲ್ಲಿದೆ
* ಕಾವೇರಿ ಭಾಗದ 48 ತಾಲೂಕುಗಳಲ್ಲಿ 42 ತಾಲೂಕುಗಳು ಬರಪೀಡಿತ ಪ್ರದೇಶಗಳು
* ಮಳೆ ಸರಿಯಾಗಿರದ ಕಾರಣ ಮಂಡ್ಯದಲ್ಲಿ ರೈತರ ಸರಣಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿ ನಡೆದಿವೆ.
ತಮಿಳುನಾಡಿನ ಬಗ್ಗೆ ತಜ್ಞರ ತಂಡದ ವರದಿಯಲ್ಲೇನಿದೆ?
* ಮೆಟ್ಟೂರಿನಲ್ಲಿ 31 ಟಿಎಂಸಿಗಿಂತ ಹೆಚ್ಚು ನೀರಿನ ಲೈವ್ ಸ್ಟೋರೇಜ್ ಇದೆ.
* ಈಶಾನ್ಯ ಮುಂಗಾರು ಬಾಕಿ ಇದ್ದು, ಅದು ಸರಿಯಾಗಿ ಆದರೆ 70 ಟಿಎಂಸಿಗಿಂತ ಹೆಚ್ಚು ನೀರು ಸಂಗ್ರಹವಾಗಲಿದೆ.
* 2017ರವರೆಗೆ ತಮಿಳುನಾಡಿಗೆ ಬೇಕಾದ ನೀರು 163 ಟಿಎಂಸಿ; ನೀರು ಬರುವ ಸಾಧ್ಯತೆ ಇರುವುದು 148 ಟಿಎಂಸಿ
