Asianet Suvarna News Asianet Suvarna News

ಎಸ್ಎಸ್ಎಲ್‌ಸಿ ಫಲಿತಾಂಶ : ಇಲ್ಲಿದೆ, ಮರು ಪರೀಕ್ಷೆ, ಮರು ಮೌಲ್ಯಮಾಪನದ ಸಂಪೂರ್ಣ ಮಾಹಿತಿ

2017 - 18 ನೇ ಸಾಲಿನ ಶೈಕ್ಷಣಿಕ  ವರ್ಷದ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದೆ. ಫಲಿತಾಂಶ ಕೆಲ ವಿದ್ಯಾರ್ಥಿಗಳು ಪಾಸಾಗಲು ಬೇಕಾದ ಅಂಕವನ್ನು ಪಡೆಯುವಲ್ಲಿ ವಿಫಲರಾಗಿರಬಹುದು. ಆದರೆ ನೀವು ಇನ್ನೊಮ್ಮೆ ಪರೀಕ್ಷೆ ಬರೆಯುವ ಮೂಲಕ ನಿಮ್ಮ ಶಿಕ್ಷಣವನ್ನು ಮುಂದುವರಿಸಬಹುದಾಗಿದೆ. ಯಾವಾಗ ಪರೀಕ್ಷೆ, ಕೊನೆಯ ದಿನಾಂಕ ಎಂದು ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. 
 

SSLC results: Here is all you need to know about revaluation, supplementary exams

ಬೆಂಗಳೂರು : 2017  - 18 ನೇ ಸಾಲಿನ ಶೈಕ್ಷಣಿಕ  ವರ್ಷದ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದೆ. ಫಲಿತಾಂಶ ಕೆಲ ವಿದ್ಯಾರ್ಥಿಗಳು ಪಾಸಾಗಲು ಬೇಕಾದ ಅಂಕವನ್ನು ಪಡೆಯುವಲ್ಲಿ ವಿಫಲರಾಗಿರಬಹುದು. ಆದರೆ ನೀವು ಇದಕ್ಕೆ ಚಿಂತಿಸುವ ಅಗತ್ಯವಿಲ್ಲ. ಇನ್ನೊಮ್ಮೆ ಪರೀಕ್ಷೆ ಬರೆಯುವ ಮೂಲಕ ನಿಮ್ಮ ಶಿಕ್ಷಣವನ್ನು ಮುಂದುವರಿಸಬಹುದಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಅಲ್ಲದೇ ನಿಮಗೆ ಬಂದ ಅಂಕಗಳ ಬಗ್ಗೆ ತೃಪ್ತಿ ಇಲ್ಲದಿದ್ದರೂ ನೀವು ಮತ್ತೊಮ್ಮೆ ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಇನ್ನು ನಿಮ್ಮ ಉತ್ತರ ಪತ್ರಿಕೆಯ ಪ್ರತಿಗಳನ್ನು ಪಡೆಯಲು ಅವಕಾಶವಿದ್ದು, ಇದಕ್ಕೆ ಮೇ 9 ರಿಂದ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. 

ಆನ್ ಲೈನ್ ಮೂಲಕ  http://kseeb.kar.nic.in/ ಈ ವೆಬ್ ಸೈಟ್ ಗೆ ಭೇಟಿ ಕೊಟ್ಟು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಮರು ಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಕೆ ಮಾಡಲು ಮೇ 21 ಕೊನೆಯ ದಿನಾಂಕವಾಗಿದೆ. ಒಂದು ಪತ್ರಿಕೆಯ ಮರು ಮೌಲ್ಯಮಾಪನಕ್ಕೆ 705 ರು. ಶುಲ್ಕ ಭರಿಸಬೇಕಾಗುತ್ತದೆ. 

ಇನ್ನು ನಿಮ್ಮ ಉತ್ತರ ಪತ್ರಿಕೆಯ ಪ್ರತಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸಲು ಕೊನೆ ದಿನಾಂಕ  ಮೇ 18 ಆಗಿದ್ದು ಪ್ರತೀ ಪತ್ರಿಕೆಗೆ 305 ರು. ಶುಲ್ಕ ಭರಿಸಬೇಕಾಗುತ್ತದೆ. ಮೇ 11 ರಿಂದ ಮರು ಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. 

ಇನ್ನು ಈ ಬಾರಿ ಅನುತ್ತಿರ್ಣರಾದಲ್ಲಿ  ಜೂನ್ 21ರಿಂದ  ಜೂನ್ 28ರವರೆಗೆ ಮರು ಪರೀಕ್ಷೆ ನಡೆಸಲಾಗುತ್ತಿದೆ.  ಮೇ. 8ರಿಂದ ಮರು ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಮೇ 19 ರವರೆಗೆ ಅವಕಾಶವಿದೆ.

Follow Us:
Download App:
  • android
  • ios