ಇಂದಿನಿಂದ ವೆಬ್'ಸೈಟ್'ನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ. ನಾಳೆ, ಆಯಾ ಶಾಲೆಗಳಲ್ಲಿ ಸಮಗ್ರ ಫಲಿತಾಂಶ ಲಭ್ಯವಿರಲಿದೆ. ಮರುಮೌಲ್ಯಮಾಪನ ಮತ್ತು ಮರು ಎಣಿಕೆ ನಡೆಸಲು ಮೇ 22 ಕೊನೆಯ ದಿನಾಂಕವಾಗಿದೆ.
ಬೆಂಗಳೂರು(ಮೇ 12): ನಿನ್ನೆ ಪಿಯುಸಿ ಬಳಿಕ ಇಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಶೇ. 67.87ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಇಂದು ಸುದ್ದಿಗೋಷ್ಠಿಯಲ್ಲಿ ಫಲಿತಾಂಶವನ್ನು ಘೋಷಿಸಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಶೇ.8ರಷ್ಟು ಕಡಿಮೆ ಫಲಿತಾಂಶ ಬಂದಿದೆ. ಈ ವರ್ಷ ಪರೀಕ್ಷೆ ಬರೆದ 8,56,286 ವಿದ್ಯಾರ್ಥಿಗಳ ಪೈಕಿ 5,81,199 ವಿದ್ಯಾರ್ಥಿಗಳು ಪಾಸಾಗಿದ್ದಾರೆ. 2,75,087 ವಿದ್ಯಾರ್ಥಿಗಳು ಫೇಲ್ ಆಗಿದ್ಧಾರೆ..
ಪಿಯುಸಿ ಫಲಿತಾಂಶದಂತೆಯೇ ಎಸ್ಸೆಸ್ಸೆಲ್ಸಿಯಲ್ಲೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಮೊದಲೆರಡು ಸ್ಥಾನ ಕಾಯ್ದುಕೊಂಡಿವೆ. ಬೀದರ್ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಉಡುಪಿ ಜಿಲ್ಲೆ ಶೇ.84.23 ಫಲಿತಾಂಶ ಪಡೆದರೆ, ದಕ್ಷಿಣ ಕನ್ನಡ ಶೇ. 82.39 ಪಡೆದಿದೆ. ಶೇ.62.20 ಫಲಿತಾಂಶ ಹೊಂದಿರುವ ಬೀದರ್ ಕಡೆಯ ಸ್ಥಾನದಲ್ಲಿದೆ. ಬೆಂಗಳೂರಿನ ವಿಷಯಕ್ಕೆ ಬಂದರೆ, ನಗರ ಪ್ರದೇಶದವರಿಗಿಂತ ಗ್ರಾಮಾಂತರದವರು ಮೇಲುಗೈ ಸಾಧಿಸಿದ್ದಾರೆ.
ಇಂದಿನಿಂದ ವೆಬ್'ಸೈಟ್'ನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ. ನಾಳೆ, ಆಯಾ ಶಾಲೆಗಳಲ್ಲಿ ಸಮಗ್ರ ಫಲಿತಾಂಶ ಲಭ್ಯವಿರಲಿದೆ. ಮರುಮೌಲ್ಯಮಾಪನ ಮತ್ತು ಮರು ಎಣಿಕೆ ನಡೆಸಲು ಮೇ 22 ಕೊನೆಯ ದಿನಾಂಕವಾಗಿದೆ.
ಫಲಿತಾಂಶ ವೀಕ್ಷಿಸಲು ಈ ಎರಡು ವೆಬ್'ಸೈಟ್'ಗಳಿಗೆ ಭೇಟಿ ನೀಡಬಹುದು. karresults.nic.in ಮತ್ತು sslc.kar.nic.in ಕ್ಲಿಕ್ ಮಾಡಿ.
