ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ : ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ

SSLC Result Declared
Highlights

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಉತ್ತರ ಕನ್ನಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ಸುಮಾರು ಎಂಟು ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಂದಿನಂತೆ ಈ ಬಾರಿಯೂ ಕೂಡ ವಿದ್ಯಾರ್ಥಿನಿಯರೇ ಮೇಲು ಗೈ ಸಾಧಿಸಿದ್ದಾರೆ. ನಗರ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ವಿದ್ಯಾರ್ಥಿಗಳು ಮೈಲುಗೈ ಸಾಧಿಸಿದ್ದು ಈ ವರ್ಷದ ಫಲಿತಾಂಶ ಹೆಗ್ಗಳಿಕೆ.

ಬೆಂಗಳೂರು : 2017-18 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದೆ. ನಗರ ವಿದ್ಯಾರ್ಥಿಗಳಿಗಿಂತ, ಗ್ರಾಮೀಣ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ತೋರಿರುವುದು ಈ ವರ್ಷದ ವಿಶೇಷ.

ಈ ಬಾರಿ ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಉತ್ತರ ಕನ್ನಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ತೃತೀಯ ಸ್ಥಾನವನ್ನು ಚಿಕ್ಕೋಡಿ ಪಡೆದುಕೊಂಡಿದೆ. ಯಾದಗಿರಿ ಪಟ್ಟಿಯಲ್ಲಿ ಕಡೆಯ ಸ್ಥಾನ ಪಡೆದುಕೊಂಡಿದೆ.

ಸುಮಾರು ಎಂಟು ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಂದಿನಂತೆ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.  ಈ ಬಾರಿ ಶೇ.71.93ರಷ್ಟು ಫಲಿತಾಂಶ ಬಂದಿದೆ. ಕಳೆದ ಬಾರಿ ಶೆ.67.87ರಷ್ಟು ಫಲಿತಾಂಶ ಬಂದಿತ್ತು. 

ರಾಜ್ಯದ 102 ಸರ್ಕಾರಿ ಶಾಲೆಗಳಲ್ಲಿ ಶೇ.100 ರಷ್ಟು ಫಲಿತಾಂಶ ಬಂದಿದೆ. 43 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಕಳೆದ ಬಾರಿಗಿಂತ ಈ ಬಾರಿ ಶೇ.4.06ರಷ್ಟು ಫಲಿತಾಂಶ ಹೆಚ್ಚಳವಾಗಿದೆ. 6,0806 ಮಕ್ಕಳು ಉತ್ತೀರ್ಣರಾಗಿದ್ದಾರೆ. 625 ಅಂಕವನ್ನು ಇಬ್ಬರು ವಿದ್ಯಾರ್ಥಿಗಳು ಪಡೆದುಕೊಂಡು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಮೈಸೂರಿನ ಸದ್ವಿದ್ಯಾ ಶಾಲೆಯ ಯಶಸ್ ರಾಜ್ಯಕ್ಕೆ ಮೊದಲಿಗರಾಗಿದ್ದಾರೆ. 

ಫಲಿತಾಂಶದ ಮುಖ್ಯಾಂಶಗಳು ಈ ರೀತಿ ಇವೆ

ಮೊದಲ ಸ್ಥಾನ ಪಡೆದ ವಿದ್ಯಾರ್ಥಿಗಳು (ಪಡೆದ ಅಂಕ 625ಕ್ಕೆ 625)

ಯಶಸ್ ಮತ್ತು ಸುದರ್ಶನ್

ಎರಡನೇ ಸ್ಥಾನ ಪಡೆದವರು-624 ಅಂಕಗಳು
ಮೊಹಮದ್​ ಕೈಫ್​​ಮುಲ್ಲಾ- ಬೆಳಗಾವಿ-ಬೆಳಗಾವಿ ಬಿಸಿ
ಅದಿತಿ  ಎ ರಾವ್​​. -ಸದ್ವಿದ್ಯಾ ಹೈಸ್ಕೂಲ್​. ಮೈಸೂರು
ಶಿವಾನಿ ಎಂ ಭಟ್​​-624-ಮರಿಮಲ್ಲಪ್ಪ ಹೈಸ್ಕೂಲ್​​-ಮೈಸೂರು
ಮೇಧಾ ಎನ್​ ಭಟ್​​ -ಟಿಎಂಪೈ ಇಂಗ್ಲಿಷ್​​ ಹೈಸ್ಕೂಲ್​​-ಕುಂಜಿಬೆಟ್ಟು ಉಡುಪಿ
ಶ್ರೀನಿವಾಸ್​​ ಎಂ​ಎ- ಥಾಮಸ್​​ ಮೆಮೋ ಇಂಗ್ಲಿಷ್​ ಸ್ಕೂಲ್​​-ನೆಲಮಂಗಲ
ಕೀರ್ತನಾ ಆರ್​.-ಸದ್ವಿದ್ಯಾ ಹೈಸ್ಕೂಲ್​. ಮೈಸೂರು
ಪ್ರಾಂಶುಲಾ ಪ್ರಶಾಂತ್​​-ಆಲ್ವಾಸ್​​ ಇಂಗ್ಲಿಷ್​​ ಮೀಡಿಯಂ ಸ್ಕೂಲ್​​- ಮೂಡುಬಿದರೆ
ಶ್ರೀಹರಿ ಅಡಿಗ-ಸರಸ್ವತಿ ವಿದ್ಯಾಮಂದಿರ ಹೈಸ್ಕೂಲ್​​-ಬೆಂಗಳೂರು 
---------------
3ನೇ ಸ್ಥಾನ ಪಡೆದವರು- 623 ಅಂಕಗಳು
ವಿ.ಅನಘಾ ರಾವ್​​-ಕಿಶೋರ್​​ ವಿದ್ಯಾಭವನ್​ ಚಿಂತಾಮಣಿ
ಮಯಾ ಎಸ್​ ರಾವ್​​-ವಿಕಾಸ ಹೈಸ್ಕೂಲ್​​-ಶಿವಮೊಗ್ಗ
ಮೊನಿಷಾ ಎಮ್​​.-ವಾಗ್ದೇವಿ ಹೈಸ್ಕೂಲ್​​-ಹೊಳಲ್ಕೆರೆ
ಧನಲಕ್ಷ್ಮಿ ವಿ.-ಆರ್​​.ಕೆ. ವಿಷನ್​​ ಹೈಸ್ಕೂಲ್​​-ಚಿಂತಾಮಣಿ
ಮನೋಜ್​ ಎಂ.ಮಲ್ಯ-ಇಂದ್ರಾಲಿ ಹೈಸ್ಕೂಲ್​​-ಉಡುಪಿ
ಲಕ್ಷ್ಮೀಪತಿ ರೆಡ್ಡಿ ಬಿ.ಎಸ್​-ಶ್ರೀ ಸಪ್ತಗಿರಿ ವಿದ್ಯಾಲಯ-ಶ್ರೀನಿವಾಸಪುರ
ಸ್ಪಂದನಾ ದೇವ್​-ಸೇಂಟ್​ ಥಾಮಸ್​ ಹೈಸ್ಕೂಲ್​-ಮೈಸೂರು
ಹಿಮ.ಬಿ- ವಿಜಯ ಹೈಸ್ಕೂಲ್​​-ಹಾಸನ್​​
ಎಂ.ಕೆ.ಕಾವೇರಿಯಪ್ಪ-ವಿಜಯ ಹೈಸ್ಕೂಲ್​​ ಹಾಸನ್​
ಅಭಿಜ್ಞಾ ರಾವ್​​-ಕುಮಾರಸ್ವಾಮಿ ಹೈಸ್ಕೂಲ್​​-ಸುಳ್ಯ
ಶ್ರೀನಂದಿನಿ ಕೆಆರ್​​-ವಿವಿಎಸ್​ ಪಂಡಿತ್​​ ನೆಹ್ರೂ ಹೈಸ್ಕೂಲ್​​-ಮೈಸೂರು 


ಈ ವರ್ಷ SSLCಯಲ್ಲಿ ರಾಜ್ಯಾದ್ಯಂತ ಶೇ.71.93% ವಿದ್ಯಾರ್ಥಿಗಳು ಪಾಸು
602802 ಪಾಸದವರು. 838088 ಹಾಜರಾದವರು
ಸರ್ಕಾರಿ ಶಾಲೆಗಳಲ್ಲಿ ಶೆ. 75.12 ರಷ್ಟು ಫಲಿತಾಂಶ
ಅನುದಾನಿತ ಶಾಲೆಗಳಲ್ಲಿ 76.27. ಫಲಿತಾಂಶ
ಅನುದಾನ ರಹಿತ ಶಾಲೆಗಳಲ್ಲೂ ಶೇ. 83. 05 ಫಲಿತಾಂಶ
ಈ ಬಾರಿ ರಿಸಲ್ಟ್, 4% ಹೆಚ್ಚಳ
--
ಮೊದಲ ರ‍್ಯಾಂಕ್​ 625 ಇಬ್ಬರಿಗೆ ಮೊದಲ ರ‍್ಯಾಂಕ್


624 -ಎರಡನೇ ಸ್ಥಾನ 8 ಜನರಿಗೆ ಹಂಚಿಕೆ 
623-ಮೂರನೇ ಸ್ಥಾನ 12 ಜನರಿಗೆ ಹಂಚಿಕೆ
622- ನಾಲ್ಕನೇ ಸ್ಥಾನ 22 ಜನರಿಗೆ ಹಂಚಿಕೆ
ಉಡುಪಿ ಜಿಲ್ಲೆಗೆ ಮೊದಲನೇ ಸ್ಥಾನ-ಶೇ. 88.18 
ಉತ್ತರ ಕನ್ನಡಕ್ಕೆ ಎರಡನೇ ಸ್ಥಾನ-ಶೇ. 88.12
ಚಿಕ್ಕೋಡಿ ಮೂರ್ನೇ ಸ್ಥಾನ-ಶೇ. 87.01
ಮಂಗಳೂರು ನಾಲ್ಕನೇ ಸ್ಥಾನ-85.56
ಯಾಗಿರಿಗೆ ಕೊನೆ ಸ್ಥಾನ-35.54

ವಿದ್ಯಾರ್ಥಿನಿಯರೇ ಮೇಲುಗೈ
ಉತ್ತೀರ್ಣರಾದ ವಿದ್ಯಾರ್ನಿಯರು ಶೇ. 78. 01 
ಉತ್ತೀರ್ಣರಾದ ವಿದ್ಯಾರ್ಥಿಗಳು ಶೇ.66.56
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳದ್ದೇ ಮೇಲುಗೈ
ಗ್ರಾಮೀಣ ಪ್ರದೇಶ -ಶೇ.74 
ನಗರ ಪ್ರದೇಶ-ಶೇ.69.38 
ಆಂಗ್ಲ ಮಧ್ಯಮ ಶೇ. 81.23
ಕನ್ನಡ ಮಾಧ್ಯಮ-67.33
 102 ಸರ್ಕಾರಿ ಶಾಲೆಗಳ ಶೇ. 100ರಷ್ಟು ಫಲಿತಾಂಶ
06 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ಫಲಿತಾಂಶ
ಅನುದಾನಿತ 414 ಶಾಲೆಗಳಲ್ಲಿ 100ರಷ್ಟು ಫಲಿತಾಂಶ
ಅನುದಾನರಹಿತ 826 ಶಾಲೆಗಳಲ್ಲಿ 100ರಷ್ಟು ಫಲಿತಾಂಶ
ಅನುದಾನರಹಿತ 35 ಶಾಲೆಗಳಲ್ಲಿ ಶೂನ್ಯರಷ್ಟು ಫಲಿತಾಂಶ
1342 ಶಾಲೆಗಳಲ್ಲಿ ಶೇ.100
ಒಟ್ಟು 43 ಶಾಲೆಗಳ್ಲಿ ಶೂನ್ಯ ಫಲಿತಾಂಶ


ಫಲಿತಾಂಶ ಲಭ್ಯವಾಗುವ ವೆಬ್ ಸೈಟ್

http://karresults.nic.in/

ಯಶಸ್ ಮೈಸೂರು 

 

ಪ್ರಂಶುಲಾ ಪ್ರಶಾಂತ್, ಆಳ್ವಾಸ್ ಇಂಗ್ಲೀಷ್ ಮೀಡಿಯಂ ಹೈ ಸ್ಕೂಲ್, ಮೂಡಬಿದ್ರೆ- 624

loader