‘ಈಗ ಆಗಿ​ರು​ವುದೇ ಸಾಕು. ಮತ್ತೆ ಮತ್ತೆ ಆಪ​ರೇ​ಷನ್‌ ಕೆಲ​ಸಕ್ಕೆ ಕೈ ಹಾಕು​ವು​ದಿಲ್ಲ’ ಎಂದು ಮೊಳ​ಕಾ​ಲ್ಮುರು ಶಾಸಕ ಶ್ರೀ​ರಾ​ಮುಲು ಸ್ಪಷ್ಟ​ಪ​ಡಿ​ಸಿ​ದ್ದಾ​ರೆ. ಈ ಮೂಲಕ ಬಿಜೆ​ಪಿಗೆ ‘ಆಪ​ರೇ​ಷನ್‌ ಕಮಲ’ ನಡೆ​ಸುವ ಉದ್ದೇಶ ಇಲ್ಲ ಎಂದು ಹೇಳಿ​ದ್ದಾ​ರೆ.

ಬಳ್ಳಾರಿ :  ‘ಈಗ ಆಗಿ​ರು​ವುದೇ ಸಾಕು. ಮತ್ತೆ ಮತ್ತೆ ಆಪ​ರೇ​ಷನ್‌ ಕೆಲ​ಸಕ್ಕೆ ಕೈ ಹಾಕು​ವು​ದಿಲ್ಲ’ ಎಂದು ಮೊಳ​ಕಾ​ಲ್ಮುರು ಶಾಸಕ ಬಿ. ಶ್ರೀ​ರಾ​ಮುಲು ಸ್ಪಷ್ಟ​ಪ​ಡಿ​ಸಿ​ದ್ದಾ​ರೆ. ಈ ಮೂಲಕ ಬಿಜೆ​ಪಿಗೆ ‘ಆಪ​ರೇ​ಷನ್‌ ಕಮಲ’ ನಡೆ​ಸುವ ಉದ್ದೇಶ ಇಲ್ಲ ಎಂದು ಹೇಳಿ​ದ್ದಾ​ರೆ.

ನಗ​ರ​ದಲ್ಲಿ ಗುರು​ವಾರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿ, ‘ನಾವಂತೂ ಆಪರೇಷನ್‌ ಕಮಲ ಮಾಡಲು ಮುಂದಾಗುವುದಿಲ್ಲ. ಈಗ ಆಗಿರುವುದೇ ಸಾಕು. ಮತ್ತೆ ಮತ್ತೆ ಆಪರೇಷನ್‌ ಕೆಲಸಕ್ಕೆ ಕೈ ಹಾಕುವುದಿಲ್ಲ. ಏನೇ ಮಾತನಾಡಿದರೂ ರೆಕಾರ್ಡ್‌ ಮಾಡುತ್ತಾರೆ. ಹೀಗಾಗಿ ಆಪರೇಷನ್‌ ಬಗ್ಗೆ ನಾವು ಒಂಚೂರು ಆಲೋಚಿಸುವುದಿಲ್ಲ. ಆ ಕಡೆ ತಲೆ ಮಾಡಿಯೂ ಮಲಗುವುದಿಲ್ಲ’ ಎಂದು ತಿಳಿಸಿದರು.

ತೃತೀಯ ರಂಗ ಮಳೆಗಾಲದಲ್ಲಿ ಬೆಳೆಯುವ ಅಣಬೆಯಿದ್ದಂತೆ. ಬಹಳಷ್ಟುದಿನ ಉಳಿಯುವುದಿಲ್ಲ. ತೃತೀಯ ರಂಗಕ್ಕೆ ಭವಿಷ್ಯವಿಲ್ಲ. ತೃತೀಯ ರಂಗದಲ್ಲಿನ ಎಲ್ಲ ಪಕ್ಷಗಳು ಮೋದಿ ಅವರ ವಿರುದ್ಧ ಸೋತು ಸುಣ್ಣವಾದ ಪಕ್ಷಗಳೇ ಆಗಿವೆ ಎಂದು ಶ್ರೀರಾ​ಮುಲು ಇದೇ ವೇಳೆ ಹೇಳಿ​ದ​ರು.

ಎಚ್‌.ಡಿ. ಕುಮಾರಸ್ವಾಮಿ ಅವರ ಪ್ರಮಾಣವಚನ ಸಮಾರಂಭಕ್ಕೆ ಆಗಮಿಸಿದ್ದ ಎಲ್ಲ ತೃತೀಯ ರಂಗದ ನಾಯಕರಿಗೆ ಪ್ರಾದೇಶಿಕ ಹಿತಸಾಕ್ತಿಯೇ ಮುಖ್ಯ ಹೊರತು, ರಾಷ್ಟ್ರೀಯ ಹಿತಾಸಕ್ತಿಗಳಿಲ್ಲ. ಅವರೆಲ್ಲರೂ ಒಂದುಗೂಡಲು ಸಾಧ್ಯವೇ ಇಲ್ಲ. ತೃತೀಯ ರಂಗ ಒಂದಾಗುವುದು ಎಂದರೆ ತಕ್ಕಡಿಯಲ್ಲಿಟ್ಟು ಕಪ್ಪೆಗಳನ್ನು ತೂಗಿದಂತೆ ಎಂದು ವ್ಯಂಗ್ಯವಾಡಿದರು. ಇದೇ ವೇಳೆ, ಮಾಜಿ ಸಚಿವ ಜನಾರ್ದನ ರೆಡ್ಡಿ ಸಕ್ರಿಯ ರಾಜಕೀಯಕ್ಕೆ ಬರುವುದು ಪಕ್ಷದ ಹೈಕಮಾಂಡ್‌ಗೆ ಬಿಟ್ಟದ್ದು. ರೆಡ್ಡಿ ರಾಜಕಾರಣದಲ್ಲಿ ಸಕ್ರಿಯವಾಗುವ ಕುರಿತು ನಾನು ಮಾತನಾಡುವುದು ಸರಿಯಲ್ಲ. ಪಕ್ಷವೇ ಅದನ್ನು ನಿರ್ಧರಿಸಬೇಕು ಎಂದರು.