ಸಚಿವ ಸ್ಥಾನದಿಂದ ನನ್ನನ್ನು ನಿರ್ದಾಕ್ಷಿಣ್ಯವಾಗಿ ಕಿತ್ತು ಹಾಕಿದ್ರು. ನನಗೆ ಅವಮಾನ ಮಾಡಿದ್ರು. ನಾನು ಮಂತ್ರಿ ಮಾಡಿ ಅಂತ ಯಾರ ಮನೆ ಬಾಗಿಲಿಗೂ ಹೋದವನಲ್ಲ. ನಿಮಗೆ ಪರಮಾಧಿಕಾರವಿದೆ. ಆದರೆ ಪರಮಾಧಿಕಾರದ ಜೊತೆಗೆ ವಿವೇಚನೆಯೂ ಮುಖ್ಯ ಎಂದು ಚುನಾವಣಾ ಪ್ರಚಾರದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಶ್ರೀನಿವಾಸ ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. 

ಬೆಂಗಳೂರು (ಏ.06): ಸಚಿವ ಸ್ಥಾನದಿಂದ ನನ್ನನ್ನು ನಿರ್ದಾಕ್ಷಿಣ್ಯವಾಗಿ ಕಿತ್ತು ಹಾಕಿದ್ರು. ನನಗೆ ಅವಮಾನ ಮಾಡಿದ್ರು. ನಾನು ಮಂತ್ರಿ ಮಾಡಿ ಅಂತ ಯಾರ ಮನೆ ಬಾಗಿಲಿಗೂ ಹೋದವನಲ್ಲ. ನಿಮಗೆ ಪರಮಾಧಿಕಾರವಿದೆ. ಆದರೆ ಪರಮಾಧಿಕಾರದ ಜೊತೆಗೆ ವಿವೇಚನೆಯೂ ಮುಖ್ಯ ಎಂದು ಚುನಾವಣಾ ಪ್ರಚಾರದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಶ್ರೀನಿವಾಸ ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪರಮಾಧಿಕಾರದ ಜೊತೆಗೆ ವಿವೇಚನೆ ಇದ್ದಾಗ ಮಾತ್ರ ಗೌರವ ಸಿಗುತ್ತೆ. ಏಕಾಏಕಿ 14 ಮಂದಿಯನ್ನ ಕೈಬಿಟ್ರಿ. 40 ವರ್ಷಗಳ ರಾಜಕೀಯ ಜೀವನಕ್ಕೆ ಅವಮಾನ ಮಾಡಿದ್ರಿ. ನಿಮಗಿಂತ ಹಿರಿಯ ರಾಜಕಾರಣಿ ನಾನು. ನನ್ನನ್ನ ತೆಗೆದು ಆ ಸ್ಥಾನಕ್ಕೆ ಪ್ರಿಯಾಂಕ ಖರ್ಗೆಯನ್ನ ಭರ್ತಿ ಮಾಡಿದ್ರಿ. ದಲಿತರನ್ನ ನೀವು ಕಡೆಗಣಿಸಿದ್ದೀರಿ ಎಂದು ಕಿಡಿಕಾರಿದ್ದಾರೆ.

ಈ ಚುನಾವಣೆಯಲ್ಲಿ ನಾನೆನೆನ್ನುವುದನ್ನ ತೋರಿಸುತ್ತೇನೆ. ಭೂಕಂಪ ಆದಾಗ ಮೊದಲು ಹೊರ ಬರುವುದು ಹಾವು - ಚೇಳುಗಳು. ಹಾಗೆಯೇ ಈಗ ರಾಜಕೀಯ ಭೂಕಂಪ ಆಗ್ತಿದೆ. ಅದಕ್ಕೆ ಸಿದ್ದರಾಮಯ್ಯ ಸಂಪುಟದ ಹಾವು ಚೇಳುಗಳು ಹೊರ ಬರ್ತಿದೆ ಎಂದು ವಿ. ಶ್ರೀನಿವಾಸಪ್ರಸಾದ ಲೇವಡಿ ಮಾಡಿದ್ದಾರೆ.