ಮೈಸೂರು(ಅ.15): ಹಿರಿಯ ರಾಜಕಾರಣಿ, ಮಾಜಿ ಸಚಿವ ವಿ. ಶ್ರೀನಿವಾಸಪ್ರಸಾದ್ ಭಾವುಕರಾಗಿ ಗಳಗಳನೇ ಅತ್ತ ಘಟನೆ ಮೈಸೂರಿನಲ್ಲಿ ನೆಡೆದಿದೆ. ರಾಜ್ಯಮಟ್ಟದ ಬೌದ್ಧ ಧರ್ಮ ಸ್ವೀಕಾರ ಸಮಾವೇಶದಲ್ಲಿ ಭಾಗವಹಿಸಿದ್ದ ಶ್ರೀನಿವಾಸಪ್ರಸಾದ್ ಕವಿ ಸಿದ್ದಲಿಂಗಯ್ಯ ರಚಿಸಿದ ಹಾಡಿಗೆ ಭಾವುಕರಾಗಿದ್ದಾರೆ. `ನಾಡ ನಡುವಿನಿಂದ ಬಂದ ನೋವಿನ ಕೂಗೆ, ಆಕಾಶದ ಅಗಲಕ್ಕೂ ನಿಂತ ಆಲವೇ..'.ಎಂಬ ಹಾಡನ್ನು ಹಾಡಲಾರಂಭಿಸಿದಾಗ ಪ್ರಸಾದ್ ತೀವ್ರ ಭಾವೋದ್ವೆಗಕ್ಕೆ ಒಳಗಾದರು. ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ತೊರೆದಿರುವ ಪ್ರಸಾದ್ ಕಾಂಗ್ರೆಸ್​ ಪಕ್ಷದಲ್ಲಿ ತಾವು ನಂಬಿದ್ದ ನಾಯಕರೇ ತಮಗೆ ಕೈಕೊಟ್ಟು ಮೋಸ ಮಾಡಿದ್ದನ್ನು ತಮ್ಮ ಇಂದಿನ ಸ್ಥಿತಿಯನ್ನು ನೆನೆದು ಕಣ್ಣೀರು ಹಾಕಿದ್ದು ಸಮಾವೇಶದಲ್ಲಿದ್ದ ಎಲ್ಲರನ್ನು ಭಾವುಕರನ್ನಾಗಿ ಮಾಡಿತು.

ಎಂತಹದ್ದೇ ಪರಿಸ್ಥಿತಿಯಲ್ಲೂ ಕಣ್ಣು ತೇವ ಮಾಡಿಕೊಳ್ಳದ ಪ್ರಸಾದ್ ಇವತ್ತು ಮಾತ್ರ ಅತ್ಯಂತ ಭಾವುಕರಾದ ಕ್ಷಣಕ್ಕೆ ಸಮಾವೇಶ ಸಾಕ್ಷಿಯಾಯಿತು.