ದುಬೈ ಹೋಟೆಲ್’ನಲ್ಲಿ ಶ್ರೀ ದೇವಿ ಕೊನೆ ಕ್ಷಣ ಹೇಗಿತ್ತು ಗೊತ್ತಾ..?

First Published 26, Feb 2018, 11:27 AM IST
Sridevi Last Movement In Dubai Hotel
Highlights

ಭಾರತದ ಅತ್ಯಂತ ಪ್ರಸಿದ್ಧ ನಟಿ ಸೂಪರ್ ಸ್ಟಾರಿಣಿ ಎಂದೇ ಕರೆಸಿಕೊಳ್ಳುತ್ತಿದ್ದ ಶ್ರೀ ದೇವಿ ದುಬೈಗೆ ತೆರಳಿದ್ದ ವೇಳೆ ಮೃತಪಟ್ಟು ತಮ್ಮ ಅಭಿಮಾನಿಗಳಿಗೆ ಆಘಾತವನ್ನೇ ಉಂಟು ಮಾಡಿದರು. 

ಮುಂಬೈ : ಭಾರತದ ಅತ್ಯಂತ ಪ್ರಸಿದ್ಧ ನಟಿ ಸೂಪರ್ ಸ್ಟಾರಿಣಿ ಎಂದೇ ಕರೆಸಿಕೊಳ್ಳುತ್ತಿದ್ದ ಶ್ರೀ ದೇವಿ ದುಬೈಗೆ ತೆರಳಿದ್ದ ವೇಳೆ ಮೃತಪಟ್ಟು ತಮ್ಮ ಅಭಿಮಾನಿಗಳಿಗೆ ಆಘಾತವನ್ನೇ ಉಂಟು ಮಾಡಿದರು. ದುಬೈ ಹೋಟೆಲ್’ನಲ್ಲಿ ಉಳಿದುಕೊಂಡಿದ್ದ ವೇಳೆ ಅಲ್ಲಿ ಕೊನೆಯುಸಿರೆಳೆದರು. ಅಲ್ಲಿ ಅವರ ಕೊನೆಯ ಕ್ಷಣ ಹೇಗಿತ್ತು ಗೊತ್ತಾ. ಸಾಯುವ ಮುನ್ನ ತಮ್ಮ ಪತಿಯೊಂದಿಗೆ ಊಟಕ್ಕೆ ತೆರಳಲು ಸಿದ್ಧವಾಗಿದ್ದರು.

ಅದಕ್ಕೂ ಮುನ್ನ ಬಾತ್ ರೂಂಗೆ ಹೋಗಿದ್ದ ಶ್ರೀ ದೇವಿ ಸುಮಾರು 15 ನಿಮಿಷ ಕಳೆದರೂ ಕೂಡ ಹೊರಕ್ಕೆ ಬರಲಿಲ್ಲ. ಇದರಿಂದ ಆತಂಕಗೊಂಡ ಬೋನಿ ಕಪೂರ್ ಬಾಗಿಲನ್ನು ಬಡಿದಿದ್ದಾರೆ. ಅಲ್ಲಿಂದ ಯಾವುದೇ ರೀತಿಯಾದ ಪ್ರತಿಕ್ರಿಯೆ ಬಾರದಾದಾಗ ಆತಂಕಗೊಂಡ ಬೋನಿ ಕಪೂರ್ ಬಾಗಿಲನ್ನು ಒಡೆದು ಒಳಕ್ಕೆ ಹೋಗಿದ್ದಾರೆ. ಆಗ ನೀರು ತುಂಬಿದ್ದ ಬಾತ್ ಟಬ್ ಒಳಗೆ ಆಕೆ ಬಿದ್ದಿದ್ದರು. ಈ ವೇಳೆ ಬೋನಿ ಕಪೂರ್ ತಕ್ಷಣವೇ ಎಲ್ಲಿರಿಗೂ ವಿಚಾರ ತಿಳಿಸಿದ್ದಾರೆ.  ಬಳಿಕ ಈ ವಿಚಾರವನ್ನು ಪೊಲೀಸರಿಗೆ ತಿಳಿಸಲಾಗಿದೆ.

ತಕ್ಷಣವೇ ಪೊಲೀಸರು ಹಾಗೂ ವೈದ್ಯರು ಸ್ಥಳಕ್ಕೆ ಆಗಮಿಸಿ ಪರೀಕ್ಷಿಸುವಷ್ಟರಲ್ಲಿಯೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.  

loader