ಪದಾಧಿಕಾರಿ ಹಾಗೂ ಕಾರ್ಯಕರ್ತರ ನಡುವೆ ಉಂಟಾದ ಮನಸ್ತಾಪದಿಂದ ಶ್ರೀರಾಮ ಸೇನೆಯ ಬೆಳಗಾವಿ ಘಟಕದ ಕಾರ್ಯಕರ್ತರು ಸಾಮೂಹಿಕವಾಗಿ ರಾಜೀನಾಮೆ ನೀಡಿ  ಪರ್ಯಾಯವಾಗಿ ಹೊಸ ಸಂಘಟನೆಯೊಂದನ್ನು ರಚಿಸಿಕೊಂಡಿದ್ದಾರೆ. 

ಬೆಳಗಾವಿ: ಶ್ರೀರಾಮ ಸೇನೆ ಪದಾಧಿಕಾರಿ ಹಾಗೂ ಕಾರ್ಯಕರ್ತರ ನಡುವೆ ಉಂಟಾದ ಮನಸ್ತಾಪದಿಂದ ಶ್ರೀರಾಮ ಸೇನೆಯ ಬೆಳಗಾವಿ ಘಟಕದ ಕಾರ್ಯಕರ್ತರು ಸಾಮೂಹಿಕವಾಗಿ ರಾಜೀನಾಮೆ ನೀಡಿ ಪರ್ಯಾಯವಾಗಿ ಶ್ರೀರಾಮ ಸೇನಾ ಹಿಂದೂಸ್ತಾನ್ ಎಂಬ ಹೊಸ ಸಂಘಟನೆ ಸ್ಥಾಪಿಸಿಕೊಂಡಿದ್ದಾರೆ. 

ಅಲ್ಲದೆ, ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ರಮಾಕಾಂತ್ ಕೊಂಡುಸ್ಕರ್ ನೇತೃತ್ವದಲ್ಲಿ ರಚನೆಯಾದ ‘ಶ್ರೀರಾಮ ಸೇನಾ ಹಿಂದೂಸ್ತಾನ್’ ಎನ್ನುವ ಹೊಸ ಸಂಘದ ಮೊದಲ ಸಭೆಯನ್ನು ಭಾನುವಾರ ನಡೆಸಲಾಯಿತು.