ಕೊಲಂಬೋ[ಏ.25]: ನೆಗೊಂಬಾದ ಸೇಂಟ್‌ ಸೆಬಾಸ್ಟಿಯನ್‌ ಚರ್ಚ್ ಗೆ ಆತ್ಮಹತ್ಯಾ ದಾಳಿಕೋರ ಚರ್ಚ್ ಪ್ರವೇಶಿಸುವ ಮುನ್ನ, ರಸ್ತೆಯಲ್ಲಿ ತನಗೆ ಎದುರಾಗಿದ್ದ ಸಣ್ಣ ಬಾಲಕಿಯ ಗಲ್ಲ ಸವರಿ ಮುಂದೆ ಸಾಗಿದ್ದ ಸಂಗತಿ ಬಯಲಾಗಿದೆ.

ದಾಳಿಕೋರ ಸ್ಫೋಟಕ ತುಂಬಿಕೊಂಡಿದ್ದ ಬ್ಯಾಗ್‌ ಹಾಕಿಕೊಂಡು ಚರ್ಚ್ ನತ್ತ ಸಾಗುತ್ತಿರುತ್ತಾನೆ. ಈ ವೇಳೆ ಸಮೀಪದಲ್ಲೇ ತಂದೆಯೊಂದಿಗೆ ನಡೆದು ಹೋಗುತ್ತಿದ್ದ ಪುಟ್ಟಮಗುವೊಂದು ಎದುರಾಗುತ್ತದೆ. ಈ ವೇಳೆ ದಾಳಿಕೋರ, ಆ ಬಾಲಕಿಯ ಕೆನ್ನೆ ಸವರಿ ಮುಂದೆ ಸಾಗುತ್ತಾನೆ. ಮುಂದೆ ಕೆಲವೇ ನಿಮಿಷಗಳಲ್ಲಿ ಚರ್ಚ್ ನ ಒಳಗೆ ಪ್ರವೇಶಿಸುವ ಆತ, ಪ್ರಾರ್ಥನೆ ವೇಳೆಯೇ ತನ್ನನ್ನು ತಾನು ಸ್ಫೋಟಿಸಿಕೊಂಡು ಹಲವಾರು ಜನರನ್ನು ಬಲಿ ಪಡೆಯುತ್ತಾನೆ.

ಈ ಎಲ್ಲಾ ದೃಶ್ಯಗಳು, ಚರ್ಚ್ ಸಮೀಪ ಮತ್ತು ಚರ್ಚ್ ನಲ್ಲಿ ಅಳವಡಿಸಿದ್ದ ಸಿಸಿಟೀವಿಯಲ್ಲಿ ಸೆರೆಯಾಗಿದೆ.