ಉಡುಪಿ‌[ಸೆ.14]  ಕುಂದಾಪುರ ಮೂಲದ ಶ್ರೀ ದುರ್ಗಾಂಬಾ ಟ್ರಾವೆಲ್ಸ್ ಮಾಲೀಕ ಸಚ್ಚಿದಾನಂದ ಚಾತ್ರ ಅವರ ಪುತ್ರ ಸುನಿಲ್ ಚಾತ್ರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ತಮಿಳುನಾಡಿನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸುನಿಲ್ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.

ತಮಿಳುನಾಡಿನ ನಮಕ್ಕಲ್ ಜಿಲ್ಲೆಯಲ್ಲಿ ಪಜೆರೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಮಧ್ಯಾಹ್ನ ಮೂರು ಗಂಟೆ ಹೊತ್ತಿಗೆ ನಡೆದ ರಸ್ತೆ ಅಪಘಾತದಲ್ಲಿ ಸುನಿಲ್ ಚಾತ್ರ ಸಾವನ್ನಪ್ಪಿದ್ದಾರೆ. ತಮಿಳುನಾಡಿನ ನಮಕ್ಕಲ್ ಜಿಲ್ಲೆಯಲ್ಲಿ ಘೋರ ಅಪಘಾತ ಸಂಭವಿಸಿದೆ. ಕಾರು ಸ್ಕಿಡ್ ಆಡಿ ನಿಯಂತ್ರಣ ತಪ್ಪಿದೆ.

ವ್ಯವಹಾರ ನಿಮಿತ್ತ ತಮಿಳುನಾಡಿನಿಂದ ಚಾತ್ರ ಹಿಂದಿರುಗುತ್ತಿದ್ದರು. ಛತ್ತೀಸ್ ಘಡ ಮತ್ತು ಮಧ್ಯ ಪ್ರದೇಶದಲ್ಲಿಯೂ ವ್ಯವಹಾರ ಹೊಂದಿದ್ದರು. ಚಾಲಕನ ಸ್ಥಿತಿಯೂ ಗಂಭೀರವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.ಜಿಲ್ಲೆಯ ಪ್ರಸಿದ್ದ ಕಮಲಶಿಲೆ ದೇವಾಲಯದ ಆಡಳಿತ ಮೊಕೇಸ್ತರರಾದ ಸಚ್ಚಿದಾನಂದ ಚಾತ್ರರ ಪುತ್ರರಾಗಿರುವ ಸುನಿಲ್ ತಮಿಳುನಾಡಿಗೆ ತೆರಳಿದ್ದರು. ಮೃತರು (41) ಪತ್ನಿ, ಓರ್ವ ಪುತ್ರಿಯನ್ನು ಅಗಲಿದ್ದಾರೆ.