ಸ್ಪೈಸ್ ಜೆಟ್ ಭರ್ಜರಿ ಆಫರ್ : ಕಡಿಮೆ ದರದಲ್ಲಿ ವಿಮಾನದಲ್ಲಿ ಪ್ರಯಾಣಿಸಿ

https://static.asianetnews.com/images/authors/2c1b126a-9adf-5f82-ae4f-e781463685fe.jpg
First Published 11, Jul 2018, 2:14 PM IST
SpiceJet Big offers tickets at Rs 999
Highlights

ಇಂಡಿಗೋ, ಏರ್ ಏಷಿಯಾ ಬಳಿಕ ಇದೀಗ ಸ್ಪೈಸ್  ಜೆಟ್ ಹೊಸ ಆಫರ್ ಒಂದನ್ನು ನೀಡುತ್ತಿದೆ. ನಿಮ್ಮ ವಿಮಾನ ಪ್ರಯಾಣದ  ಕನಸನ್ನು ನನಸು ಮಾಡಿಕೊಳ್ಳಲು ಇದು ಸೂಕ್ತ ಸಮಯವಾಗಿದೆ. 

ಬೆಂಗಳೂರು :  ಇಂಡಿಗೋ, ಏರ್ ಏಷಿಯಾ ಬಳಿಕ ಇದೀಗ ಸ್ಪೈಸ್ ಜೆಟ್ ಹೊಸ ಆಫರ್ ಒಂದನ್ನು ನೀಡುತ್ತಿದೆ. ನಿಮ್ಮ ವಿಮಾನ ಪ್ರಯಾಣದ  ಕನಸನ್ನು ನನಸು ಮಾಡಿಕೊಳ್ಳಲು ಇದು ಬೆಸ್ಟ್ ಸಮಯವಾಗಿದೆ. 

ಜುಲೈ 13ರವರೆಗೆ ಈ ಅವಕಾಶವನ್ನು ನೀಡುತ್ತಿದ್ದು, ಟಿಕೆಟ್ ದರ 999 ರಿಂದ ಆರಂಭವಾಗಿದೆ. ಮೆಗಾ ಮಾನ್ಸೂನ್ ಸೇಲ್ ಅಡಿಯಲ್ಲಿ ಈ ಆಫರ್ ಮೂಲಕ ನೀವು ಅಕ್ಟೋಬರ್ 8 ರವರೆಗೆ ಪ್ರಯಾಣಿಸಬಹುದಾಗಿದೆ. 

ಇನ್ನು ಹೆಚ್ಚುವರಿಯಾಗಿ ಕೆಲ ಸೌಲಭ್ಯಗಳನ್ನೂ ಕೂಡ ನೀಡುತ್ತಿದೆ. ಈ ಆಫರ್ www.spicejet.com. ಮೂಲಕ ಬುಕ್ ಮಾಡಿದಲ್ಲಿ ಮಾತ್ರವೇ ದೊರೆಯಲಿದೆ. 

ಜುಲೈ 4 ರಿಂದಲೇ ಈ ಭರ್ಜರಿ ಆಫರ್ ಗೆ ಟಿಕೆಟ್ ಬುಕಿಂಗ್ ಆರಂಭವಾಗಿದ್ದು, ಇನ್ನು ಕೇವಲ  2 ದಿನ ಮಾತ್ರವೇ ಕಾಲಾವಕಾಶವಿದೆ. ಅಷ್ಟರಲ್ಲೇ ಟಿಕೆಟ್ ಬುಕ್ ಮಾಡುವ ಮೂಲಕ ನಿಮ್ಮ ವಿಮಾನ ಪ್ರಯಾಣದ ಕನಸನ್ನು ನನಸು ಮಾಡಿಕೊಳ್ಳಬಹುದಾಗಿದೆ. 

loader