ಭೂಮಿಯ ಕಕ್ಷೆಯ ದಾಟಿ ಅಂತರಿಕ್ಷದಲ್ಲಿ ಹಾರಾಡಬೇಕು ಎಂಬ ಕನಸನ್ನು ಒಂದೆಲ್ಲಾ ಒಂದು ಸಾರಿ ಮಾನವ ಕಂಡಿರುತ್ತಾನೆ. ಅದೇ ಅಂತರಿಕ್ಷದಲ್ಲಿ ನೂರಾರು ದಿನ ಕಳೆದು ಭೂಮಿಗೆ ಹಿಂದಿರುಗಿದರೆ ಏನಾಗುತ್ತದೆ ಎಂಬುದಕ್ಕೆ ಒಂದು ನೈಜ ಉದಾಹರಣೆ ಇಲ್ಲಿದೆ.

ನವದೆಹಲಿ[ಡಿ.26] ಅಂತರಿಕ್ಷದಲ್ಲಿ 197 ದಿನ ಕಳೆದು ಬಂದ ಗಗನಯಾನಿ ಭೂಮಿ ಮೇಲೆ ನಡೆಯಲು ಹರಸಾಹಸ ಪಟ್ಟರು. ಅಂತರಿಕ್ಷದಲ್ಲಿ ಕಾಲ ಕಳೆದ ಇವರಿಗೆ ಭೂಮಿಯ ಮೇಲಿನ ಕೆಲವು ಕೆಲಸಗಳು ಸಂಕಷ್ಟ ತಂದೊಡ್ಡಿದ್ದವು.

ಎ ಜೆ.ಪ್ಯೂಸ್ಟೆಲ್​ ಜತೆ ಮತ್ತಿಬ್ಬರು ಗಗನಯಾತ್ರಿಗಳು 197 ದಿನ ಅಂತರಿಕ್ಷದಲ್ಲಿ ಕಳೆದು ಭೂಮಿಗೆ ಮರಳಿದ್ದಾರೆ. ಅಂತರಿಕ್ಷದಲ್ಲಿ ತೇಲಿ ತೇಲಿ ಅನುಭವವಿದ್ದ ಇವರಿಗೆ ಭೂಮಿಗೆ ಬಂದ ಬಳಿಕ ಇಲ್ಲಿನ ಗುರುತ್ವಾಕರ್ಷಣೆಗೆ ಹೊಂದಿಕೊಳ್ಳುವುದು ಕಷ್ಟವಾಗಿತ್ತು. ಈ ವಿಚಾರವನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅವರೆ ಹಂಚಿಕೊಂಡಿದ್ದಾರೆ.

ಡಿಸೆಂಬರ್ 21ರ ಹಿಂದಿದೆ ಅತಿ ಚಿಕ್ಕಹಗಲು, ಅತಿ ಚಿಕ್ಕ ರಾತ್ರಿ...ಏನಿದು ಕತೆ?

ಭೂಮಿಯ ಗುರುತ್ವಾಕರ್ಷಣೆ ಮೀರಿ ಹಲವು ದಿನ ಇದ್ದ ಇವರಿಗೆ ಆದ ಅನುಭವದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Scroll to load tweet…