ಪ್ರಧಾನಿ ನರೇಂದ್ರ ಮೋದಿ ಆಂಧ್ರದ ಅಭಿವೃದ್ಧಿಗಾಗಿ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಲು ಸಿದ್ಧವಿದ್ದರೆ, ಬಿಜೆಪಿ ಜತೆಗಿನ ಮೈತ್ರಿಗೆ ಸಿದ್ಧ ಎಂದು ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ವೈ.ಎಸ್. ಜಗನ್ಮೋಹನ್ ರೆಡ್ಡಿ ತಿಳಿಸಿದ್ದಾರೆ.

ತಿರುಪತಿ: ಪ್ರಧಾನಿ ನರೇಂದ್ರ ಮೋದಿ ಆಂಧ್ರದ ಅಭಿವೃದ್ಧಿಗಾಗಿ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಲು ಸಿದ್ಧವಿದ್ದರೆ, ಬಿಜೆಪಿ ಜತೆಗಿನ ಮೈತ್ರಿಗೆ ಸಿದ್ಧ ಎಂದು ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ವೈ.ಎಸ್. ಜಗನ್ಮೋಹನ್ ರೆಡ್ಡಿ ತಿಳಿಸಿದ್ದಾರೆ.

67 ದಿನಗಳ ಕಾಲ 900 ಕಿ.ಮೀ ಕಾಲ್ನಡಿಗೆಯ ಪ್ರಜಾ ಸಂಕಲ್ಪ ಯಾತ್ರೆಯನ್ನು ಸೋಮವಾರ ತಿರುಪತಿಯಲ್ಲಿ ಪೂರ್ಣಗೊಳಿಸಿದ ಜಗನ್‌ಮೋಹನ್ ಮಾತನಾಡಿ, ‘ಆಂಧ್ರಕ್ಕೆ ಕೇಂದ್ರ ಸರ್ಕಾರ ವಿಶೇಷ ಸ್ಥಾನಮಾನ ನೀಡಲು ಸಿದ್ಧವಿದ್ದರೆ, ನಾವು ಅವರ ಜತೆಗೆ ಹೋಗಲು ಬದ್ಧ’ ಎಂದು ಹೇಳಿದ್ದಾರೆ.

ಇದೇ ವೇಳೆ ಚಂದ್ರ ಬಾಬು ನಾಯ್ಡು ವಿರುದ್ಧ ವಾಗ್ದಾಳಿ ನಡೆಸಿದ ಜಗನ್, 70 ವರ್ಷ ಗಳ ಹಿಂದೆ ಕರ್ನಾಟಕದಲ್ಲಿ ಕೇವಲ 4 ವರ್ಷಗಳಲ್ಲಿ ಅತ್ಯಾಕರ್ಷಕ ವಿಧಾನಸೌಧ ನಿರ್ಮಿಸಲಾಯಿತು. ಆದರೆ ಆಂಧ್ರ ರಾಜಧಾನಿ ಅಮರಾವತಿ ನಿರ್ಮಾಣದ ಹೆಸರಲ್ಲಿ ನಾಯ್ಡು ಜನರನ್ನು ವಂಚಿಸುತ್ತಿದ್ದಾರೆ’ ಎಂದರು.