ಕೊಚ್ಚಿ (ಅ.07): ಕೇರಳದಲ್ಲಿ ನಿಮಗೆ ಬೀದಿನಾಯಿಗಳನ್ನು ಹೊಡೆದುರುಳಿಸಬೇಕೆಂದಿದ್ದರೆ ಅಥವಾ ಬೀದಿ ನಾಯಿ ಕೊಂದ ಆರೋಪ ನಿಮ್ಮ ಮೇಲಿದ್ದರೆ, ನಿಮಗೆ ಏರ್’ಗನ್’ಗಳು ರಿಯಾಯಿತಿ ದರದಲ್ಲಿ ಒದಗಿಸಲು ಸಂಘಟನೆಯೊಂದು ಮುಂದೆ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೇರಳದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದ್ದು ಈವರೆಗೆ ಕೊಟ್ಟಾಯಂ ಜಿಲ್ಲೆಯಲ್ಲೇ 30 ಬೀದಿನಾಯಿಗಳನ್ನು ಕೊಲ್ಲಲಾಗಿದೆ. ಈ ಹಿನ್ನೆಲೆಯಲ್ಲಿ, ಸಂತ ಥಾಮಸ್ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘವು, ಬೀದಿನಾಯಿಗಳ ಹಾವಳಿಯಿಂದ ಬೇಸತ್ತವರಿಗೆ ಏರ್’ಗನ್ ಖರೀದಿಸಲು ಶೇ.10 ರಿಯಾಯಿತಿ ನೀಡುವುದಾಗಿ ಘೋಷಿಸಿದೆ.

ಆದರೆ ರಿಯಾಯಿತಿ ಪಡೆಯಲು ಬಯಸುವವನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕನಿಷ್ಠ ಒಂದು ಪ್ರಕರಣ ದಾಖಲಾಗಿರಬೇಕಂತೆ.