ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸೋಮವಾರ ಅಪರೂಪದ ವಿವಾಹದ ದಿಬ್ಬಣವೊಂದಕ್ಕೆ ನಾಗರಿಕರು ಸಾಕ್ಷಿಗಳಾದರು. 

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸೋಮವಾರ ಅಪರೂಪದ ವಿವಾಹದ ದಿಬ್ಬಣವೊಂದಕ್ಕೆ ನಾಗರಿಕರು ಸಾಕ್ಷಿಗಳಾದರು. ಪುತ್ತೂರು ನಗರದಲ್ಲಿ ಎಕ್ಸ್‌ಕವೇಟರ್ ಆಪರೇಟರ್ ಆಗಿರುವ ಚೇತನ್ ಅವರ ವಿವಾಹ ಮಮತಾ ಎಂಬವರೊಂದಿಗೆ ಕುಂಬ್ರದ ಕೊಯ್ಲತ್ತಡ್ಕ ಶಿವಕೃಪಾ ಆಡಿಟೋರಿಯಂನಲ್ಲಿ ಸೋಮವಾರ ನಡೆಯಿತು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಸಂದರ್ಭ ಮದುವೆಯ ದಿಬ್ಬಣ ಮಾಣಿ-ಮೈಸೂರು ಹೆದ್ದಾರಿಯಲ್ಲಿ ಸುಮಾರು 2 ಕಿ.ಮೀ. ದೂರ ಎಕ್ಸ್‌ಕವೇಟರ್ (ಜೆಸಿಬಿ ಎಂದೇ ಜನಜನಿತ)ನಲ್ಲೇ ಸಾಗಿದ್ದು ವಿಶೇಷವಾಗಿತ್ತು. ಈ ಚಿತ್ರ ಈಗ ಸಾಮಾಜಿಕ ಜಾಲ ತಾಣದಲ್ಲೂ ಪ್ರಚಾರ ಪಡೆಯುತ್ತಿದೆ.