Asianet Suvarna News Asianet Suvarna News

#Exclusive: ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಹೆಗ್ಗಣಗಳು ಸಾರ್.. ಹೆಗ್ಗಣಗಳು..!

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯರು ರೋಗಿಗಳನ್ನು ನೋಡಲು ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಇಲ್ಲಿ ಹೆಗ್ಗಣಗಳು ಮಾತ್ರ ಪ್ರತಿ ಕ್ಷಣ, ಪ್ರತೀ ದಿನ ರೋಗಿಗಳ ಅಕ್ಕ-ಪಕ್ಕಾನೆ ಓಡಾಡುತ್ತಿರುತ್ತವೆ. ರಾತ್ರಿಯಾದರೆ ರೋಗಿಗಳ ಮೈಮೇಲೆ ಆಟ ಆಡುತ್ತವೆ. ಕೆಲವೊಂದು ಸಲ ರೋಗಿಗಳಿಗೆ ಕಚ್ಚಿ ಗಾಯವನ್ನೂ ಮಾಡುತ್ತವೆ. ವಿಕ್ಟೋರಿಯಾ ಆಸ್ಪತ್ರೆಯ ಈ ಅಧ್ವಾನದ ಬಗ್ಗೆ  ರೋಗಿಗಳು ಮತ್ತವರ ಸಂಬಂಧಿಗಳು ಅಧಿಕಾರಿಗಳ ಗಮನಕ್ಕೆ ತಂದರೂ ಏನೂ ಪ್ರಯೋಜನ ಆಗಿಲ್ಲ.

Special Guests In Victoria Hospital Created Fear In The Patients

ಬೆಂಗಳೂರು(.02): ಅದು ಬೆಂಗಳೂರಿನ ದೊಡ್ಡ ಸರ್ಕಾರಿ ಆಸ್ಪತ್ರೆ. ಇಲ್ಲಿ ರೋಗಿಗಳಿಗೆ ಹೆಚ್ಚಾಗಿ ದರ್ಶನ ಕೊಡುವವರು ವೈದ್ಯರಲ್ಲ. ಬದಲಾಗಿ ವಿಶೇಷ ಅತಿಥಿಗಳು. ಈ ವಿಶೇಷ ಅತಿಥಿಗಳು ಎಲ್ಲೆಂದರಲ್ಲಿ ಸ್ವಚ್ಛಂದವಾಗಿ ಓಡಾಡ್ತಾರೆ. ರೋಗಿಗಳಿಗೆ ಭಯವನ್ನೂ ಹುಟ್ಟಿಸುತ್ತವೆ. ಅವರನ್ನು ಕಂಡರೆ ರೋಗಿಗಳು, ಅವರ ಸಂಬಂಧಿಕರು ಮಾರು ದೂರ ಓಡಿ ಹೋಗಲೇಬೇಕಾಗುತ್ತದೆ. ಅಸಲಿಗೆ ಆ ಆಸ್ಪತ್ರೆ ಯಾವುದು..? ಆ ವಿಶೇಷ ಅತಿಥಿಗಳು ಯಾರು? ಇಲ್ಲಿದೆ ಸಂಪೂರ್ಣ ವಿವರ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯರು ರೋಗಿಗಳನ್ನು ನೋಡಲು ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಇಲ್ಲಿ ಹೆಗ್ಗಣಗಳು ಮಾತ್ರ ಪ್ರತಿ ಕ್ಷಣ, ಪ್ರತೀ ದಿನ ರೋಗಿಗಳ ಅಕ್ಕ-ಪಕ್ಕಾನೆ ಓಡಾಡುತ್ತಿರುತ್ತವೆ. ರಾತ್ರಿಯಾದರೆ ರೋಗಿಗಳ ಮೈಮೇಲೆ ಆಟ ಆಡುತ್ತವೆ. ಕೆಲವೊಂದು ಸಲ ರೋಗಿಗಳಿಗೆ ಕಚ್ಚಿ ಗಾಯವನ್ನೂ ಮಾಡುತ್ತವೆ. ವಿಕ್ಟೋರಿಯಾ ಆಸ್ಪತ್ರೆಯ ಈ ಅಧ್ವಾನದ ಬಗ್ಗೆ  ರೋಗಿಗಳು ಮತ್ತವರ ಸಂಬಂಧಿಗಳು ಅಧಿಕಾರಿಗಳ ಗಮನಕ್ಕೆ ತಂದರೂ ಏನೂ ಪ್ರಯೋಜನ ಆಗಿಲ್ಲ.

ಆಸ್ಪತ್ರೆಯಲ್ಲಿರುವ ಹೆಗ್ಗಣಗಳ ಕಾರುಬಾರು ಬಗ್ಗೆ ವಿಕ್ಟೋರಿಯಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ದುರ್ಗಪ್ಪ ಅವರನ್ನು ಸುವರ್ಣ ನ್ಯೂಸ್​ ಸಂಪರ್ಕಿಸಿತು. ಆದರೆ, ಅವರು ಈ ವಿಚಾರವಾಗಿ ಮಾತನಾಡಲು ತಯಾರಿಲ್ಲ. ಬೆನ್ನು ಬಿದ್ದಾಗ ಡಾ.ದುರ್ಗಪ್ಪ ತಮ್ಮ ಛೇಂಬರ್​ನಿಂದ ಹೊರಬಂದು ಕಾರು ಹತ್ತಿ ಓಡಿಹೋಗಿದ್ದಾರೆ.

ಪ್ರತಿ ವರ್ಷ ಆಸ್ಪತ್ರೆ ನಿರ್ವಹಣೆಗೆ ಲಕ್ಷಾಂತರ ರೂಪಾಯಿ ಸರ್ಕಾರ ಬಿಡುಗಡೆ ಮಾಡುತ್ತವೆ. ಆದರೆ, ಆ ಹಣ ಯಾವುದಕ್ಕೆ ಖರ್ಚ ಮಾಡಲಾಗುತ್ತದೆ ಅಂತ ಯಾರಿಗೂ ಗೊತ್ತಿಲ್ಲ. ಬಹುಶಃ ಆಸ್ಪತ್ರೆಯಲ್ಲಿರುವ ಹೆಗ್ಗಣಗಳೇ ತಿಂದಿರಬೇಕು. ಅದೇನಿದ್ದರೂ, ರೋಗಿಗಳಿಗೆ ಆಗುತ್ತಿರುವ ತೊಂದರೆಗಳನ್ನು ಆದಷ್ಟು ಬೇಗ ಬಗೆಹರಿಸಲಿ ಎನ್ನುವುದೇ ನಮ್ಮ ಆಶಯ.

Follow Us:
Download App:
  • android
  • ios