ನವದೆಹಲಿ, [ಸೆ.14]: ಮನಿ ಲಾಂಡರಿಂಗ್ ಪ್ರಕರದಲ್ಲಿ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಗೆ ಇಡಿ ಕಸ್ಟಡಿ  ಮುಂದುವರಿಕೆ.

ಇಂದು (ಶುಕ್ರವಾರ)  ವಿಚಾರಣೆ ನಡೆಸಿದ ರೋಸ್ ಅವೆನ್ಯೂ ಕೋರ್ಟ್, ಡಿಕೆ ಶಿವಕುಮಾರ್ ಅವರನ್ನು ಮತ್ತೆ ಸೆಪ್ಟೆಂಬರ್ 17ರ ವರೆಗೆ ಅಂದ್ರೆ 4 ದಿನ ಇಡಿ ವಶಕ್ಕೆ ನೀಡಿ ಆದೇಶ ಹೊರಡಿಸಿದೆ. 

ಟ್ರಬಲ್ ಶೂಟರ್‌ಗೆ ಬಿಗ್ ಟ್ರಬಲ್: ಇಡಿ ವಶಕ್ಕೆ ಡಿಕೆ ಶಿವಕುಮಾರ್

ಸೆ.4ರಂದು ಡಿ.ಕೆ. ಶಿವಕುಮಾರ್‌ರನ್ನು ಇಡಿ. ವಶಕ್ಕೆ ನೀಡಿದ್ದ ಇದೇ ರೋಸ್ ಅವೆನ್ಯೂ ಕೋರ್ಟ್ ಸೆ.14ಕ್ಕೆ ಮುಂದಿನ ವಿಚಾರಣೆ ನಿಗದಿ ಪಡಿಸಿತ್ತು. ಅದರಂತೆಯೇ ಇಂದು ಡಿ.ಕೆ. ಶಿವಕುಮಾರ್‌ ಅವರನ್ನು ಇಡಿ ವಿಶೇ‍ಷ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು.

ಡಿಕೆಶಿ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಡಿಕೆಶಿ ಪರ ಡಿಕೆಶಿ ಪರ ವಕೀಲ ಅಭಿಷೇಕ್ ಮನು ಸಂಘ್ವಿ ಹಾಗೂ ದಯಾನ್ ಕೃಷ್ಣನ್  ಅವರು ಸುದೀರ್ಘವಾಗಿ ವಾದ ಮಂಡಿಸಿದರು. ಡಿಕೆ ಶಿವಕುಮಾರ್ ಅವರಿಗೆ ಆರೋಗ್ಯ ಸಮಸ್ಯೆ ಇದೆ ಎಂದು ಜಡ್ಜ್  ಅಜಯ್ ಕುಮಾರ್ ಕುಹಾರ್ ಮುಂದೆ ಹೇಳಿದರು.

ಮತ್ತೊಂದೆಡೆ ಇಡಿ ಪರ ವಕೀಲ ನಟರಾಜ್, ಡಿಕೆ ಶಿವಕುಮಾರ್ ಅವರು ವಿಚಾರಣೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ವಿಚಾರಣೆ ಮಾಡುವ ವೇಳೆ ನಿದ್ದೆ ಬರುತ್ತಿದೆ ಎಂದು ಸಮಯ ವ್ಯರ್ಥ ಮಾಡಿದ್ದಾರೆ.  ಹೀಗಾಗಿ ಅವರನ್ನು ಇನ್ನಷ್ಟು ದಿನಗಳ ಕಾಲ ವಿಚಾರಣೆ ನಡೆಸಲು ಇಡಿ ಕಸ್ಟಡಿಗೆ ನೀಡಬೇಕೆಂದು ವಾದ ಮಂಡಿಸಿದರು.

ಅಷ್ಟೇ ಅಲ್ಲದೇ ಆರೋಪಿಗೆ ಸಂಬಂಧಿಸಿದ ಸುಮಾರು 800 ಕೋಟಿ ರು. ಬೇನಾಮಿ ಆಸ್ತಿ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಜಾಮೀನು ನೀಡಿದರೆ, ನ್ಯಾಯಾಲವೇ ಅವರನ್ನು ರಕ್ಷಿಸಿದಂತಾಗುತ್ತದೆ ಅಂತೆಲ್ಲ ಸ್ಟ್ರಾಂಗ್ ವಾದ ಮಂಡಿಸಿದರು.

ವಾದ-ಪ್ರತಿವಾದ ಆಲಿಸಿದ ಇಡಿ ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್, ಆರೋಪಿಯನ್ನು (ಡಿಕೆಶಿ) ಇಡಿ ವಶಕ್ಕೆ ನೀಡಿ ಆದೇಶ ಹೊರಡಿಸಿದರು.

ಇದರಿಂದ ಡಿಕೆಶಿ ಅಭಿಮಾನಿಗಳ ಪ್ರಾರ್ಥನೆ ಫಲ ನೀಡಲಿಲ್ಲ. ಇನ್ನೊಂದು ಮಹತ್ವದ ಅಂಶ ಡಿಕೆಶಿ ಅವರು ಜಾಮೀನು ಅರ್ಜಿಯ ಅಂತಿಮ ತೀರ್ಪನ್ನು ಕೋರ್ಟ್, ಸೋಮವಾರಕ್ಕೆ ಕಾಯ್ದಿರಿಸಿದೆ.