ನವದೆಹಲಿ, [ಸೆ.04]: ಮನಿ ಲಾಂಡರಿಂಗ್ ಪ್ರಕರದಲ್ಲಿ ಬಂಧನವಾಗಿರುವ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರನ್ನು ಸೆ.13 ವರೆಗೆ ಅಂದ್ರೆ ಇಂದಿನಿಂದ 10 ದಿನಗಳ ಕಾಲ ಇಡಿ ವಶಕ್ಕೆ ನೀಡಿ ED ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ.

ನಿನ್ನೆ[ಮಂಗಳವಾರ] ಡಿಕೆ ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದು, ಇಂದು [ಬುಧವಾರ] ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಕ್ಕೆ ಹಾಜರುಪಡಿಸಿದ್ದರು. 4 ದಿನ ವಿಚಾರಣೆ ಹಾಜರಾಗಿದ್ದು,  ಉತ್ತಮವಾಗಿ ಸ್ಪಂದಿಸಿದ್ದಾರೆ. ಆದರೂ ಇಡಿ ಅಧಿಕಾರಿಗಳು ಡಿಕೆ ಶಿವಕುಮಾರ್ ಅವರನ್ನು ಬಂಧಿಸಿದ್ದಾರೆ ಎಂದು ಡಿಕೆಶಿ ಪರ ವಕೀಲ ಅಭಿಷೇಕ್ ಮನು ಸಂಘ್ವಿ ಹಾಗೂ ದಯಾನ್ ಕೃಷ್ಣನ್  ವಾದ  ಮಂಡಿಸಿದರು.

ಡಿಕೆಶಿ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ಇಡಿ ಪರ ವಕೀಲ ನಟರಾಜ್, ವಿಚಾರಣೆ ವೇಳೆ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡಿಲ್ಲ. ಹೀಗಾಗಿ ಇನ್ನಷ್ಟ ವಿಚಾರಣೆ ಅಗತ್ಯವಿದೆ. ಆದ್ದರಿಂದ ಆರೋಪಿಯನ್ನು [ಡಿಕೆಶಿ] ಇಡಿ ವಶಕ್ಕೆ ನೀಡಬೇಕೆಂದು ವಾದ ಮಂಡನೆ ಮಾಡಿದರು. 

ಸುಮಾರು 1 ಗಂಟೆಗೂ ಹೆಚ್ಚು ಕಾಲ ನಡೆದ ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್ ಅವರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ವಿಚಾರಣೆ ಅಗತ್ಯವಾಗಿದ್ದರಿಂದ ಆರೋಪಿಯನ್ನು  ಇಂದಿನಿಂದ 10 ದಿನಗಳ ವರೆಗೆ ಇಡಿ ವಶಕ್ಕೆ ನೀಡಿ ಆದೇಶ ಹೊರಡಿಸಿದರು.

 ಡಿಕೆಶಿ ಪರ ವಕೀಲ ಅಭಿಷೇಕ್ ಮನು ಸಂಘ್ವಿ ಏನೆಲ್ಲ ವಾದ ಮಂಡಿಸಿದರು? ಈ ಕೆಳಗಿನ ವಿಡಿಯೋನಲ್ಲಿದೆ

"

ಇಡಿ ಪರ ವಕೀಲರ ವಾದ ಮಂಂಡನೆ ಈ ಕೆಳಗಿನ ವಿಡಿಯೋನಲ್ಲಿದೆ

"