ತುಂಗಭದ್ರಾ ತೀರದಲ್ಲಿ ಗುಬ್ಬಿಗಳ ಚಿಲಿಪಿಲಿ

news | Monday, November 27th, 2017
suvarna Web Desk
Highlights

 ಹರವಿ- ಹರನಗಿರಿ ಸೇತುವೆಯ ಕೆಳ ಭಾಗದಲ್ಲಿ ಮಳೆ- ಗಾಳಿಯಿಂದ ರಕ್ಷಣೆ ಪಡೆಯಲು ಹಾಗೂ ಸಂತಾನೋತ್ಪತ್ತಿಗಾಗಿ ಗುಬ್ಬಚ್ಚಿಗಳು ಮಣ್ಣಿನಿಂದ ಕಟ್ಟಿಕೊಂಡಿರುವ ಗೂಡುಗಳು ನೋಡಲು ಬಹಳಷ್ಟು ಸುಂದರವಾಗಿವೆ. ಮಳೆ ಬಂದರೂ ಗೂಡುಗಳು ನೀರು ಕರಗಿ ಹೋಗದಂತೆ ಬುದ್ಧಿವಂತಿಕೆಯಿಂದ ಕಟ್ಟಿಕೊಂಡಿರುವ ಗೂಡುಗಳಲ್ಲಿ ಬತ್ತದ ಕಾಳು ಸಂಗ್ರಹಿಸಿಕೊಳ್ಳುತ್ತಿವೆ.

ಹೂವಿನಹಡಗಲಿ(ನ.27): ಇತ್ತೀಚಿನ ದಿನಮಾನದಲ್ಲಿ ಗುಬ್ಬಚ್ಚಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ಇದನ್ನರಿತ ಪಟ್ಟಣ, ನಗರ ಪ್ರದೇಶದ ಉದ್ಯಾನವನ, ಮನೆ ಮುಂದಿನ ಗಿಡ ಮರಗಳಲ್ಲಿ ಕೃತಕ ಗೂಡು ಕಟ್ಟಿ ನೀರು, ಆಹಾರ ಧಾನ್ಯಗಳನ್ನು ಹಾಕುತ್ತಿರುವ ದೃಶ್ಯಗಳು ಸಾಮಾನ್ಯ.ತಾಲೂಕಿನ ತುಂಗಭದ್ರಾ ನದಿ ತೀರದ ಹರವಿ ಹಾಗೂ  ಹರನಗಿರಿ ಮಧ್ಯೆ ನಿರ್ಮಾಣಗೊಂಡಿರುವ ಸೇತುವೆಯಲ್ಲಿ ಗುಬ್ಬಚ್ಚಿಗಳು ಮಣ್ಣಿನ ಗೂಡು ಕಟ್ಟಿಕೊಂಡು ನಲಿದಾಡುತ್ತಿವೆ.

 ಹರವಿ- ಹರನಗಿರಿ ಸೇತುವೆಯ ಕೆಳ ಭಾಗದಲ್ಲಿ ಮಳೆ- ಗಾಳಿಯಿಂದ ರಕ್ಷಣೆ ಪಡೆಯಲು ಹಾಗೂ ಸಂತಾನೋತ್ಪತ್ತಿಗಾಗಿ ಗುಬ್ಬಚ್ಚಿಗಳು ಮಣ್ಣಿನಿಂದ ಕಟ್ಟಿಕೊಂಡಿರುವ ಗೂಡುಗಳು ನೋಡಲು ಬಹಳಷ್ಟು ಸುಂದರವಾಗಿವೆ. ಮಳೆ ಬಂದರೂ ಗೂಡುಗಳು ನೀರು ಕರಗಿ ಹೋಗದಂತೆ ಬುದ್ಧಿವಂತಿಕೆಯಿಂದ ಕಟ್ಟಿಕೊಂಡಿರುವ ಗೂಡುಗಳಲ್ಲಿ ಬತ್ತದ ಕಾಳು ಸಂಗ್ರಹಿಸಿಕೊಳ್ಳುತ್ತಿವೆ. ಬೆಳೆಗಳಿಗೆ ಕೀಟ, ಚಿಟ್ಟೆಗಳನ್ನು ಬಾಧೆಯನ್ನು ಗುಬ್ಬಚ್ಚಿ ತಿಂದು ಹಾಕುತ್ತಿರುವುದರಿಂದ ರೈತನ ಮಿತ್ರವಾಗಿವೆ.

ರೈತರು ಗುಬ್ಬಚ್ಚಿಗಳ ಚಿಲಿಪಿಲಿ ಕೇಳಲು ನೋಡಿ ನಿತ್ಯ ಖುಷಿ ಪಡುತ್ತಿದ್ದಾರೆ. ಏರೈತರ ಬೆಳೆಗೆ ಯಾವ ಹಾನಿ ಮಾಡಿಲ್ಲ, ಗುಬ್ಬಿ ಇರುವುದರಿಂದ ಬತ್ತ, ಹತ್ತಿ ಸೇರಿದಂತೆ ಇತರೆ ಬೆಳೆಗಳಿಗೆ ಕೀಟ ಹಾಗೂ ಚಿಟ್ಟೆಗಳಿದ್ದರೆ ಎಲ್ಲವನ್ನು ತಿಂದು ಹಾಕುತ್ತವೆ. ಇದರಿಂದ ರೈತರ ಮಿತ್ರವಾಗಿವೆ ಎನ್ನುತ್ತಾರೆ ರೈತ ಬಾವಿಹಳ್ಳಿ ಬಸವರಾಜಪ್ಪ.

Comments 0
Add Comment

    Related Posts