ನಮ್ಮ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇಂದು ಆಂಧ್ರ ಪ್ರದೇಶದ ಶ್ರೀಹರಿಕೋಟ ಉಪಗ್ರಹ ಉಡಾವಣಾ ಕೇಂದ್ರದಿಂದ 31 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ.

ಶ್ರೀಹರಿಕೋಟಾ (ಜ.12): ನಮ್ಮ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇಂದು ಆಂಧ್ರ ಪ್ರದೇಶದ ಶ್ರೀಹರಿಕೋಟ ಉಪಗ್ರಹ ಉಡಾವಣಾ ಕೇಂದ್ರದಿಂದ 31 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ. ಇದು ಪಿಎಸ್‌ಎಲ್‌ವಿಯ 42ನೇ ಉಡಾವಣೆಯೂ ಹೌದು. ಕಾರ್ಟೊಸ್ಯಾಟ್‌ 2 ಸರಣಿಯ ಉಪಗ್ರಹ ಉಡಾವಣೆ ಜತೆಗೆ 30 ಉಪಗ್ರಹಗಳನ್ನು ಪಿಎಸ್‌ಎಲ್‌ವಿ-ಸಿ40 ಹೊತ್ತೊಯ್ದಿದೆ.

ಪಿಎಸ್‌ಎಲ್‌ವಿ ಈಗಾಗಲೇ ವಿದೇಶದ ಉಪಗ್ರಹಗಳು ಸೇರಿದಂತೆ 250ಕ್ಕೂ ಹೆಚ್ಚು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಸೇರಿಸುವ ಮೂಲಕ ಇಸ್ರೋನ ಹಿರಿಮೆ-ಗರಿಮೆಯನ್ನು ಹೆಚ್ಚಿಸಿವೆ.