ಸುವರ್ಣ ನ್ಯೂಸ್ ಜೊತೆ ಎಕ್ಸ್'ಕ್ಲೂಸಿವ್ ಆಗಿ ಮಾತನಾಡಿದ ರವಿ ಚೆನ್ನಣ್ಣನವರ್, ನಾವು ಯಾರ ಪರವೂ ಇಲ್ಲ, ಯಾರ ವಿರುದ್ಧವೂ ಅಲ್ಲ. ಸಂವಿಧಾನದ ಆಶಯದಂತೆ ಕೆಲಸ ಮಾಡುತ್ತೇವೆ. ನಾವು ಸತ್ಯದ ಪರ, ಬಡವರ ಪರ ಹಾಗೆಯೇ ಸರ್ವರ ಹಿತ ನಮಗೆ ಮುಖ್ಯ ಎನ್ನುವ ಮೂಲಕ ಮೈಸೂರು ಸಂಸದರಿಗೆ ಟಾಂಗ್ ನೀಡಿದ್ದಾರೆ.
ಮೈಸೂರು(ಡಿ.04): ನಾವು ಎಂದು ಪರಿಪೂರ್ಣರಲ್ಲ, ಅಣ್ಣಾಮಲೈಯಿಂದ ಹಿಡಿದು ಎಲ್ಲರಿಂದಲೂ ನಾನು ಕಲಿಯಬೇಕಿದೆ ಎಂದು ಹೇಳುವ ಮೂಲಕ ಮೈಸೂರು ಎಸ್ಪಿ ರವಿ ಚೆನ್ನಣ್ಣನವರ್ ಸಂಸದ ಪ್ರತಾಪ್ ಸಿಂಹಗೆ ತಿರುಗೇಟು ನೀಡಿದ್ದಾರೆ.
ಸುವರ್ಣ ನ್ಯೂಸ್ ಜೊತೆ ಎಕ್ಸ್'ಕ್ಲೂಸಿವ್ ಆಗಿ ಮಾತನಾಡಿದ ರವಿ ಚೆನ್ನಣ್ಣನವರ್, ನಾವು ಯಾರ ಪರವೂ ಇಲ್ಲ, ಯಾರ ವಿರುದ್ಧವೂ ಅಲ್ಲ. ಸಂವಿಧಾನದ ಆಶಯದಂತೆ ಕೆಲಸ ಮಾಡುತ್ತೇವೆ. ನಾವು ಸತ್ಯದ ಪರ, ಬಡವರ ಪರ ಹಾಗೆಯೇ ಸರ್ವರ ಹಿತ ನಮಗೆ ಮುಖ್ಯ ಎನ್ನುವ ಮೂಲಕ ಮೈಸೂರು ಸಂಸದರಿಗೆ ಟಾಂಗ್ ನೀಡಿದ್ದಾರೆ.
ಮೈಸೂರಿನ ಹುಣಸೂರು ಹನುಮ ಜಯಂತಿ ಮೆರವಣಿಗೆ ಗೊಂದಲದ ಬಗ್ಗೆ ಟ್ವೀಟ್'ನಲ್ಲೇ ಪ್ರತಿಕ್ರಿಯೆ ನೀಡಿದ್ದ ಪ್ರತಾಪ್ ಸಿಂಹ, ಆಳುವವರ ಅಣತಿ ಮೀರುವ ಹಾಗಿಲ್ಲ ಅಲ್ವಾ ಸರ್..? ಮೆಡಿಕಲ್ ಸೀಟ್ ಬ್ಲಾಕಿಂಗ್ ಹಗರಣ ತಡೆದ ಐಎಎಸ್ ರಶ್ಮಿ, ದತ್ತ ಜಯಂತಿಯನ್ನು ಶಾಂತಿಯುತವಾಗಿ ನಡೆಸಿಕೊಟ್ಟ ಎಸ್ಪಿ ಅಣ್ಣಾಮಲೈ ಅವರನ್ನು ನೋಡಿ ಕಲಿಯಿರಿ ಎಂದು ಎಸ್ಪಿ ಚೆನ್ನಣ್ಣನವರಿಗೆ ಟಾಂಗ್ ಕೊಟ್ಟಿದ್ದರು.