ಶ್ರೀದೇವಿ ಜೊತೆ ಬಾಲಿವುಡ್ ಆಳಿದ ದಕ್ಷಿಣ ಭಾರತದ ನಟಿಗಳಿವರು

news | Sunday, February 25th, 2018
Suvarna Web Desk
Highlights

ಬಾಲಿವುಡ್ ಮೋಹಕ ತಾರೆ ಶ್ರೀದೇವಿ ಇನ್ನು ನೆನೆಪು ಮಾತ್ರ. 80-90  ರ ದಶಕದಲ್ಲಿ ಬಾಲಿವುಡ್’ನ ಆಳಿದ ನಟಿ ಇವರು.

ಬೆಂಗಳೂರು (ಫೆ.25): ಬಾಲಿವುಡ್ ಮೋಹಕ ತಾರೆ ಶ್ರೀದೇವಿ ಇನ್ನು ನೆನೆಪು ಮಾತ್ರ. 80-90  ರ ದಶಕದಲ್ಲಿ ಬಾಲಿವುಡ್’ನ ಆಳಿದ ನಟಿ ಇವರು. 
ಶ್ರೀದೇವಿ ಮೂಲತಃ ತಮಿಳುನಾಡಿನ ಶಿವಕಾಶಿಯವರು. ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಇವರು ಬಹುಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಬಾಲಿವುಡ್’ನಲ್ಲಿ ದೊಡ್ಡ ಹೆಸರು ಮಾಡಿದ ದಕ್ಷಣ ಭಾರತದ ನಟಿಯಿವರು. ಬಾಲಿವುಡ್’ನ ಆಳಿದ ಇತರೇ ಸೌತ್ ಇಂಡಿಯನ್ ನಟಿಗಳಿವರು

ರೇಖಾ
ಚಿರ ಯೌವ್ವನೆ ರೇಖಾ ತಮಿಳುನಾಡಿನವರು. ಖ್ಯಾತ ತಮಿಳು ನಟ ಜೆಮಿನಿ ಗಣೇಶನ್ ಪುತ್ರಿ. ಬಾಲಿವುಡ್’ನಲ್ಲಿ ದೊಡ್ಡ ಹೆಸರು ಮಾಡಿದ ಮಹಾನ್ ಕಲಾವಿದೆಯಿವರು. 180 ಚಿತ್ರಗಳಲ್ಲಿ ನಟಿಸಿದ್ದಾರೆ. 


ವಹೀದಾ ರೆಹಮಾನ್ 
ಬಾಲಿವುಡ್’ನ ಪ್ರತಿಭಾನ್ವಿತ ನಟಿಯರಲ್ಲಿ ವಹೀದಾ ರೆಹಮಾನ್ ಹೆಸರು ಮುಂಚೂಣಿಯಲ್ಲಿದೆ. ಇವರು ಮೂಲತಃ ತಮಿಳುನಾಡಿನವರು. ಬೆಳೆದದ್ದೆಲ್ಲಾ ಹೖದರಾಬಾದ್’ನಲ್ಲಿ. 


 

ಜಯಪ್ರದ
ಮೋಹಕ ಚೆಲುವೆ ಜಯಪ್ರದಾ ಆಂಧ್ರ ಪ್ರದೇಶ ಮೂಲದವರು. 80-90 ರ ದಶಕದಲ್ಲಿ ಹುಡುಗರ ಹಾರ್ಟಿಗೆ ಲಗ್ಗೆ ಇಟ್ಟ ಮೋಹಕ ಚೆಲುವೆ ಜಯಪ್ರದ.

 

ವೈಜಯಂತಿ ಮಾಲಾ
ಇವರು ತಮಿಳುನಾಡು ಮೂಲದವರು. 13  ನೇ ವಯಸ್ಸಿನಲ್ಲಿ ಬಾಲಿವುಡ್ ಪ್ರವೇಶಿಸಿದರು. 1950 ರ ದಶಕದಲ್ಲಿ ಬಹುಬೇಡಿಕೆಯ ನಟಿಯಾಗಿದ್ದವರು ವೈಜಯಂತಿ ಮಾಲಾ


 

ಹೇಮಾ ಮಾಲಿನಿ
ಡ್ರೀಮ್ ಗರ್ಲ್ ಹೇಮಾ ಮಾಲಿನಿ ತಮಿಳುನಾಡಿನ ಅಮ್ಮನ್ ಕುಡಿಯಲ್ಲಿ ಜನಿಸಿದರು. 1963 ರಲ್ಲಿ ತಮಿಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. ಆ ನಂತರ ಹಿಂತಿರುಗಿ ನೋಡಲೇ ಇಲ್ಲ. ಬಾಲಿವುಡ್’ನಲ್ಲಿ ಖ್ಯಾತ ನಟರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. 

ಐಶ್ವರ್ಯ ರೈ
ಮೂಲತಃ ಕರ್ನಾಟಕದವರು. ದೇವ್’ದಾಸ್, ಹಮ್ ದಿಲ್ ದೇ ಚುಕೆ ಸನಮ್ , ಮೊಹಬ್ಬತೇ, ತಾಲ್ ಚಿತ್ರದ ಮೂಲಕ ಬಾಲಿವುಡ್’ನಲ್ಲಿ ಮಿಂಚಿದವರು. 

ವಿದ್ಯಾ ಬಾಲನ್
ಎಲ್ಲಾ ರೀತಿಯ ಪಾತ್ರಗಳಿಂದ ಜನರ ಮನಸ್ಸನ್ನು ಗೆದ್ದವರು ವಿದ್ಯಾ ಬಾಲನ್. ಇವರೂ ಕೂಡಾ ದಕ್ಷಿಣ ಬಾರತದವರು. 


ದೀಪಿಕಾ ಪಡುಕೋಣೆ
ಬಾಲಿವುಡ್’ನ ಬಹುಬೇಡಿಕೆಯ ನಟಿ  ದೀಪಿಕಾ ಕೂಡಾ ದಕ್ಷಿಣ ಭರತದ ನಟಿ. ಕೊಂಕಣಿ ಕುಟುಂಬಕ್ಕೆ ಸೇರಿದ ಇವರು ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ. 


 

ಶಿಲ್ಪಾ ಶೆಟ್ಟಿ
ತಳಕು ಬಳಕಿನ ಚೆಲುವೆ ಶಿಲ್ಪಾ ಶೆಟ್ಟಿ ಮಂಗಳೂರು ಮೂಲದವರು. ತಮ್ಮ ಸೌಂದರ್ಯ, ನಟನೆ ಮೂಲಕ ಬಾಲಿವುಡ್’ನಲ್ಲಿ ಹೆಸರು ಮಾಡಿದ್ದಾರೆ. 

 

Comments 0
Add Comment

  Related Posts

  Actress Sri Reddy to go nude in public

  video | Saturday, April 7th, 2018

  Salman Khan Convicted

  video | Thursday, April 5th, 2018

  Salman Khan Convicted

  video | Thursday, April 5th, 2018

  Bollywood Gossip News about Shahrukhkhan

  video | Saturday, March 31st, 2018

  Actress Sri Reddy to go nude in public

  video | Saturday, April 7th, 2018
  Suvarna Web Desk