ಹಲವಾರು ಬಾರಿ ಜನರು ತಮ್ಮ ಮೋಜು ಮಸ್ತಿಗಾಗಿ ಮೂಕ ಪ್ರಾಣಿಗಳಿಗೆ ತೊಂದರೆ ನೀಡುತ್ತಾರೆ. ಇಂತಹುದೇ ಘಟನೆ ಇದೀಗ ಅಮೆರಿಕಾದಲ್ಲಿ ನಡೆದಿದೆ. ಇಲ್ಲಿ ವ್ಯಕ್ತಿಗಳಿಬ್ಬರು ಮೊಸಳೆ ಮರಿಗಳಿಗೆ ಬಿಯರ್ ಕುಡಿಸಿದ್ದಲ್ಲದೇ ಈ ಫೋಟೋಗಳನ್ನು ಸಾಮಾಜಿಕ ಜಾಲಾತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳು ವೈರಲ್ ಆಗುತ್ತಿದ್ದಂತೆಯೇ ಪ್ರಾಣಿಗಳಿಗೆ ಹಿಂಸೆ ನೀಡಿದ ಆರೋಪದಡಿಯಲ್ಲಿ ಇಬ್ಬರು ಯುವಕರನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ ಇಬ್ಬರೂ ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ. ಹೀಗಾಗಿ ಇಬ್ಬರಿಗೂ ದಂಡ ವಿಧಿಸಿದ ಪೊಲೀಸರು ಬಳಿಕ ಇಬ್ಬರನ್ನೂ ಬಿಡುಗಡೆಗೊಳಿಸಿದ್ದಾರೆ.

ಮಾಧ್ಯಮವೊಂದು ಬಿತ್ತರಿಸಿದ ವರದಿಯನ್ವಯ ಸೌತ್ ಕೆರೊಲಿನಾದಲ್ಲಿ ವಾಸವಿರುವ 20 ವರ್ಷದ ಜೋಸೆಫ್ ಆ್ಯಂಡ್ರೂಸ್ ಫ್ಲಾಯ್ಡ್ ಹಾಗೂ 21 ವರ್ಷದ ಲಾಯ್ಡ್ ಬ್ರೌನ್ ಎಂಬ ಇಬ್ಬರು ಯುವಕರು ಇಂತಹ ವಿಕೃತ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದೆ. ಮೇ 24ರಂದು ಇವರಿಬ್ಬರೂ ಕಾರ್'ನಲ್ಲಿ ಸುತ್ತಾಡುತ್ತಿದ್ದರು. ಈ ವೇಳೆ ಕಾರನ್ನು ಒಂದೆಡೆ ನಿಲ್ಲಿಸಿ ಬಿಯರ್ ಕುಡಿಯುತ್ತಿದ್ದ ಇವರಿಬ್ಬರ ಕಣ್ಣಿಗೆ ಮೊಸಳೆ ಮರಿಗಳು ಕಂಡಿವೆ. ಇಬ್ಬರ ಮನದಲ್ಲೂ ಕೆಟ್ಟ ಆಲೋಚನೆಯೊಂದು ಮನೆ ಮಾಡಿದೆ. ಕೂಡಲೇ ಇಬ್ಬರೂ ಸೇರಿ ಮೊಸಳೆ ಮರಿಗಳನ್ನು ಹಿಡಿದು ಅವುಗಳಿಗೆ ಒತ್ತಾಯಪೂರ್ವಕವಾಗಿ ಬಿಯರ್ ಕುಡಿಸಿದ್ದಾರೆ. ಬಳಿಕ ಅವುಗಳನ್ನು ಅಲ್ಲೇ ಇದ್ದ ಕೆರೆಗೆ ಬಿಟ್ಟಿದ್ದಾರೆ.

ಇಬ್ಬರೂ ಈ ಘಟನೆಯ ಪೋಟೋಗಳನ್ನು ಸಾಮಾಜಿಕ ಜಾಲಾತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇವರ ಈ ಕುಕೃತ್ಯವನ್ನು ನೋಡುಗರೆಲ್ಲರೂ ಖಂಡಿಸಿದ್ದಾರೆ. ಪ್ರಕರಣ ಪೊಲೀಸರ ಗಮನಕ್ಕೆ ಬರುತ್ತಿದ್ದಂತೆಯೇ ಇಬ್ಬರನ್ನೂ ವಶಕ್ಕೆ ಪಡೆದ ಪೊಲೀಸರು 300 ಡಾಲರ್ ದಂಡ ವಿಧಿಸಿ ಬಿಡುಗಡೆಗೊಳಿಸಿದ್ದಾರೆ. ಇಲ್ಲಿನ ಕಾನೂನಿನನ್ವಯ ಮೊಸಳೆಗಳಿಗೆ ಹಾನಿಯುಂಟು ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.