ಹುನಗುಂದ ತಾಲೂಕಿನ ಹೊಸೂರಿನ ನೇತ್ರಾವತಿ ಎಂ.ಚವಾಣ್ ಗೆ ಮರಣೋತ್ತರವಾಗಿ ಗೀತಾ ಚೋಪ್ರಾ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಘೋಷಿಸಲಾಗಿದೆ. ಇಂಡಿಯನ್ ಕೌನ್ಸಿಲ್ ಬಾರ್ ಚೈಲ್ಡ್ ವೆಲ್‌'ಕೇರ್ ಈ ಪ್ರಶಸ್ತಿ ಪ್ರಕಟಿಸಿದ್ದು ಜ.24 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಬಾಗಲಕೋಟೆ (ಜ.19): ಹುನಗುಂದ ತಾಲೂಕಿನ ಹೊಸೂರಿನ ನೇತ್ರಾವತಿ ಎಂ.ಚವಾಣ್ ಗೆ ಮರಣೋತ್ತರವಾಗಿ ಗೀತಾ ಚೋಪ್ರಾ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಘೋಷಿಸಲಾಗಿದೆ. ಇಂಡಿಯನ್ ಕೌನ್ಸಿಲ್ ಬಾರ್ ಚೈಲ್ಡ್ ವೆಲ್‌'ಕೇರ್ ಈ ಪ್ರಶಸ್ತಿ ಪ್ರಕಟಿಸಿದ್ದು ಜ.24 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದೇಶದ ವಿವಿ ರಾಜ್ಯಗಳ ಒಟ್ಟು 18 ಮಕ್ಕಳು ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದು ಮೂವರಿಗೆ ಮರಣೋತ್ತರವಾಗಿ ಪ್ರಶಸ್ತಿ ಘೋಷಿಸಲಾಗಿದೆ. 2017 ರ ಮೇ 13 ರಂದು ಕಲ್ಲಿನ ಕ್ವಾರಿಯ ಸಮೀಪದಲ್ಲಿದ್ದ ಕೆರೆಯಲ್ಲಿ ಬಟ್ಟೆ ಒಗೆಯುತ್ತಿದ್ದ ಸಂದರ್ಭದಲ್ಲಿ ಮುತ್ತು ಮತ್ತು ಗಣೇಶ್ ಎಂಬ ಇಬ್ಬರು ಬಾಲಕರು ನೀರಿನಲ್ಲಿ ಮುಳುಗುತ್ತಿದ್ದರು. ತಕ್ಷಣವೇ ಅವರ ರಕ್ಷಣೆಗೆ ಧಾವಿಸಿದ ನೇತ್ರಾವತಿ ಮುತ್ತು ಅನ್ನು ದಡಕ್ಕೆ ಎಳೆದುಕೊಂಡು ಬರಲು ಸಫಲರಾದರು. ಆ ಬಳಿಕ ಗಣೇಶ್‌'ನ ರಕ್ಷಣೆಗೆ ನೇತ್ರಾವತಿ ಧಾವಿಸಿದಳು. ಆದರೆ ಗಣೇಶ್‌'ನ ರಕ್ಷಣೆ ವೇಳೆ ಇಬ್ಬರು ಕೂಡ ಪ್ರಾಣ ತೆತ್ತರು.