ಜಯನಗರ ಕ್ಷೇತ್ರದಲ್ಲಿ ಸತತ ಕೆಲ ತಿಂಗಳಿಂದ ಪ್ರಚಾರ ಮತ್ತು ಸಂಚಾರ ಪ್ರಾರಂಭಿಸಿದ್ದು, ಜನತೆಯು ಉತ್ತಮವಾಗಿ ಸ್ಪಂದನೆ ನೀಡುತ್ತಿದ್ದಾರೆ.

ಆನೇಕಲ್(ಡಿ.03): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ಜಯನಗರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಗೃಹ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾರ್ಯ'ಕ್ರಮವೊಂದರಲ್ಲಿ ಮಾತನಾಡಿ, ಜಯನಗರ ಕ್ಷೇತ್ರದಲ್ಲಿ ಮಾಡಿದ ಹಲವಾರು ಮಾದರಿ ಕಾರ್ಯಕ್ರಮಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಾಡಿರುವ ಅನನ್ಯ ಸೇವೆಯೇ ನನಗೆ ಶ್ರೀರಕ್ಷೆಯಾಗಲಿದೆ. ಜಯನಗರ ಕ್ಷೇತ್ರದಲ್ಲಿ ಸತತ ಕೆಲ ತಿಂಗಳಿಂದ ಪ್ರಚಾರ ಮತ್ತು ಸಂಚಾರ ಪ್ರಾರಂಭಿಸಿದ್ದು, ಜನತೆಯು ಉತ್ತಮವಾಗಿ ಸ್ಪಂದನೆ ನೀಡುತ್ತಿದ್ದಾರೆ. ನನಗಂತೂ ಈ ಕ್ಷೇತ್ರದಲ್ಲಿನ ಜನತೆಯ ಆಶೀರ್ವಾದ ಪಡೆದು ಗೆಲ್ಲುವ ಮೂಲಕ ಉತ್ತಮ ಸೇವೆ ಮಾಡುವುದಾಗಿ ಭರವಸೆಯಿಂದ ನುಡಿದರು.

ಸತತ ಹಲವು ವರ್ಷಗಳಿಂದ ತಂದೆಯವರ ಜೊತೆ ಸಾಮಾಜಿಕ ಸೇವಾ ಕೆಲಸಗಳಲ್ಲಿ ಪಾಲ್ಗೊಂಡಿದ್ದೆ. ರಾಜಕಾರಣ ನನ್ನ ರಕ್ತದಲ್ಲಿ ಹರಿದು ಬಂದಿದೆ. ಮಹಿಳಾ ಪ್ರತಿನಿಧಿಯಾಗಿ ವಿದ್ಯಾವಂತ ಸಮುದಾಯ ಹಾಗೂ ಬಡ ವರ್ಗದ ಜನತೆಯ ಜೊತೆ ಕೆಲಸ ಮಾಡಿದ ತೃಪ್ತಿ ಇದೆ. ಸೇವಾ ವಲಯವನ್ನು ವಿಸ್ತರಿಸುವ ಸಲುವಾಗಿ ನನ್ನ ಆಸೆಯನ್ನು ವ್ಯಕ್ತಪಡಿಸಿದಾಗ ನನ್ನ ತಂದೆಯವರು ಬೆನ್ನು ತಟ್ಟಿ ಪ್ರೋತ್ಸಾಹ ನೀಡುವುದಾಗಿ ಹರಸಿದ್ದಾರೆ ಎಂದರು.