ಬೆಂಗಳೂರಿನಲ್ಲಿ  ಮಾಂತ್ರಿಕನಿಂದ  22 ವರ್ಷದ ಯುವತಿಯ ವಶೀಕರಣ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರು(ಮಾ.09): ಬೆಂಗಳೂರಿನಲ್ಲಿ ಮಾಂತ್ರಿಕನಿಂದ 22 ವರ್ಷದ ಯುವತಿಯ ವಶೀಕರಣ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಕೇರಳದ ಸಂತೋಷ್​ ಎಂಬಾತನೇ ಯುವತಿಯೊಬ್ಬಳನ್ನು ವಶೀಕರಣ ಮಾಡಿದ್ದು, ಕಷ್ಟ ನಿವಾರಣೆ ಮಾಡುತ್ತೇನೆ ಎಂದು ಹೇಳಿ ಯುವತಿಯ ತಂದೆಯನ್ನು ಪರಿಚಯ ಮಾಡಿಕೊಂಡಿದ್ದಾನೆ. ನಂತರ ನಿಮ್ಮ ಮಗಳಿಗೆ ಒಳ್ಳೆಯದಾಗಬೇಕಾದರೆ ವಿಶೇಷ ಪೂಜೆ ಮಾಡಿಸಬೇಕೆಂದ್ದು ಹೇಳಿ ನಂಬಿಸಿದ್ದಾನೆ. ಇನ್ನು ಪೂಜೆ ನೆಪದಲ್ಲಿ ಯುವತಿಯನ್ನು ವಶೀಕರಣ ಮಾಡಿಕೊಂಡಿದ್ದಾನೆ.

ವಶೀಕರಣದ ಬಳಿಕ ಯುವತಿಯನ್ನು ತನ್ನ ಮನೆ ಮತ್ತು ಕೇರಳಕ್ಕೆ ಕರೆದೊಯ್ದು, ಕೇರಳದಲ್ಲಿ ಯುವತಿಯ ವಿಡಿಯೋ ಚಿತ್ರೀಕರಿಸಿದ್ದಾನೆ. ಇನ್ನು ಆ ಹುಡಗಿಗೆ ನಾನು ಆತ್ಮಹತ್ಯೆ ಮಾಡಿಕೊಂಡರೆ ತಂದೆ ತಾಯಿ ಕಾರಣ ಎಂದು ಯುವತಿಯಿಂದಲೇ ಪತ್ರ ಬರೆಸಿಕೊಂಡಿದ್ದ ಅಸಾಮಿ.