ಶಿವಮೊಗ್ಗ [ಜು.1]:  ಜೆಡಿಎಸ್ ಸಹವಾಸ ಮಾಡಿದವರು ಯಾರೂ ಉದ್ಧಾರ ಆಗುವುದಿಲ್ಲ ಎಂದು ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಹೇಳಿದ್ದಾರೆ. 

ವಿಜಯನಗರ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ರಾಜೀನಾಮೆ ವಿಚಾರವಾಗಿ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿ ಕುಮಾರ್ ಬಂಗಾರಪ್ಪ, ಕ್ರಾಂತಿ ರಂಗದ ಕಾಲದಿಂದಲೂ ಕೂಡ ನೋಡಿದ್ದೇವೆ. ಜೆಡಿಎಸ್ ಸಹವಾಸದಲ್ಲಿ ಬೆಳವಣಿಗೆ ಅಸಾಧ್ಯ ಎಂದರು. 

ಆನಂದ್ ಸಿಂಗ್ ರಾಜೀನಾಮೆ; ಈಶ್ವರಪ್ಪ ಭವಿಷ್ಯ ನಿಜವಾಯ್ತಾ?

ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿ ಸ್ಟಾರ್ ಹೋಟೆಲ್ ನಲ್ಲಿ ಅಧಿಕಾರ ನಡೆಸಿದ್ದಾರೆ. ತೋರಿಕೆಗಾಗಿ ಒಂದು ವಾರ ಗ್ರಾಮ ವಾಸ್ತವ್ಯ ಮಾಡಿದ್ದಾರೆ. ಈಗ ಪ್ಯಾಕೇಜ್ ಟೂರ್ ನಲ್ಲಿ ವಿದೇಶಕ್ಕೆ ಹೋಗಿ ಕುಳಿತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.   

 ವಿಜಯನಗರ ಶಾಸಕ ಆನಂದ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯನ್ನು ಸ್ವಾಗತಿಸುತ್ತೇನೆ ಎಂದು ಕುಮಾರ್ ಬಂಗಾರಪ್ಪ ಹೇಳಿದರು.