ಈ ಹಿನ್ನೆಲೆಯಲ್ಲಿ ಕೇರಳ ಸ್ಟೇಟ್‌ ಬೆವ ರೇಜಸ್‌ ಕಾರ್ಪೊರೇಷನ್‌ ಲಿಮಿಟೆಡ್‌ನ ಮದ್ಯದ ಅಂಗಡಿಯಲ್ಲಿ ಮಹಿಳೆಯರು ಉದ್ಯೋಗ ಕೈಗೊಳ್ಳುವುದಕ್ಕೆ ನಿಷೇಧ ರದ್ದುಗೊಳಿಸಿ ಅಧಿಸೂಚನೆ ಹೊರಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ತಿರುವನಂತಪುರಂ(ಜೂ.02): ಮದ್ಯ ಮಾರಾಟದ ಮೇಲೆ ನಿಯಂತ್ರಣದ ಮೂಲಕ ಸುದ್ದಿಯಾಗಿದ್ದ ಕೇರಳ ಸರ್ಕಾರ, ಇದೀಗ ಮಹಿಳೆಯರನ್ನೂ ಬಿಯರ್ ಬಾರ್, ವೈನ್ಪಾರ್ಲರ್ಗಳಲ್ಲಿ ನೇಮಕ ಮಾಡಿ ಕೊಳ್ಳಲು ಅವಕಾಶ ನೀಡುವ ಕಾಯ್ದೆ ಜಾರಿಗೆ ಮುಂದಾಗಿದೆ.2013ರಲ್ಲಿ ಕೇರಳ ಹೈಕೋರ್ಟ್ ಬಾರ್ಗಳಲ್ಲಿ ಮಹಿಳೆಯರು ಕೆಲಸ ಮಾಡುವುದರ ಪರ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಕೇರಳ ಸ್ಟೇಟ್ ಬೆವ ರೇಜಸ್ ಕಾರ್ಪೊರೇಷನ್ ಲಿಮಿಟೆಡ್ನ ಮದ್ಯದ ಅಂಗಡಿಯಲ್ಲಿ ಮಹಿಳೆಯರು ಉದ್ಯೋಗ ಕೈಗೊಳ್ಳುವುದಕ್ಕೆ ನಿಷೇಧ ರದ್ದುಗೊಳಿಸಿ ಅಧಿಸೂಚನೆ ಹೊರಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
